alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಾಟ್ ಖರೀದಿಸಿದ್ರೆ ಆಕಳು ಫ್ರೀ..!

cow

ಜನರನ್ನು ಆಕರ್ಷಿಸಲು ಕಂಪನಿಗಳು ಏನೆಲ್ಲ ಜಾಹೀರಾತು ನೀಡುತ್ವೆ. ಒಂದಕ್ಕೆ ಒಂದು ಫ್ರೀ, ಅದನ್ನು ತೆಗೆದುಕೊಂಡ್ರೆ ಇದು ಫ್ರೀ. ಮನೆ, ಭೂಮಿ ಖರೀದಿಸಿದ್ರೆ ಚಿನ್ನ, ಕಾರ್ ಫ್ರೀಯಾಗಿ ಕೊಡುವ ಬಗ್ಗೆ ನಾವು ಕೇಳಿರ್ತೇವೆ. ಆದ್ರೆ ಇಲ್ಲೊಂದು ಕಂಪನಿ ಫ್ಲಾಟ್ ಖರೀದಿಸಿದ್ರೆ ನಿಮಗೆ ಆಕಳನ್ನು ಉಚಿತವಾಗಿ ನೀಡುತ್ತೆ.

ಹೈದ್ರಾಬಾದ್ ನ ಯಾದಗಿರಿಗುಟ್ಟು ಎನ್ನುವ ಪ್ರದೇಶದಲ್ಲಿ ಒಂದು ರಿಯಲ್ ಎಸ್ಟೇಟ್ ಕಂಪನಿ ಫ್ಲಾಟ್ ಜೊತೆಗೆ ದನವನ್ನು ನೀಡ್ತಾ ಇದೆ. 400 ಚದರ ಅಡಿ ಫ್ಲಾಟ್ ಖರೀದಿಸಿದ್ರೆ 70 ಸಾವಿರ ರೂ. ಮೌಲ್ಯದ ದನವನ್ನು ಉಚಿತವಾಗಿ ನೀಡಲಾಗ್ತಾ ಇದೆ. ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ರಾಮಕೃಷ್ಣ ಹೇಳುವಂತೆ, ಫ್ಲಾಟ್ ಖರೀದಿ ಮಾಡಿದವರಿಗೆ ದನವನ್ನು ಸಾಕಲು ಸಾಧ್ಯವಾಗದಿದ್ದರೆ ಕಂಪನಿಯೇ ದನವನ್ನು ಏಳು ವರ್ಷಗಳವರೆಗೆ ಲೀಜ್ ಪಡೆಯುತ್ತದೆ. ದನವನ್ನು ಲೀಜ್ ಪಡೆದ ಕಂಪನಿ ಮೂರು ಸಾವಿರ ರೂಪಾಯಿಯನ್ನು ತಿಂಗಳಿಗೆ ಗ್ರಾಹಕರಿಗೆ ನೀಡುತ್ತದೆ. ಬಾಡಿಗೆ ಹಣ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳಲಿದೆ.

84 ತಿಂಗಳ ನಂತ್ರ ದನವನ್ನು 50 ಸಾವಿರ ರೂಪಾಯಿಗೆ ಖರೀದಿ ಮಾಡಲಾಗುತ್ತದೆ. ಇದಕ್ಕೆ ಲೀಜ್ ಒಪ್ಪಂದ ಕೂಡ ಮಾಡಿಕೊಳ್ಳಲಾಗುತ್ತದೆ. ಅನೇಕರು ದನವನ್ನು ಸಾಕುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದ್ರೆ ದನವನ್ನು ಸಾಕಲು ಅವರಿಗೆ ಜಾಗದ ಸಮಸ್ಯೆ ಎದುರಾಗಿದೆ. ಹಾಗಾಗಿ ನಮಗೆ ಆಕಳನ್ನು ನೀಡಿ ಅವರು ಹಣ ಗಳಿಸ್ತಿದ್ದಾರೆ ಎನ್ನುತ್ತಾರೆ ರಾಮಕೃಷ್ಣ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...