alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಟನ್ ಮಸಾಲಾ’ ಟೆಕ್ನಿಕ್ ನಿಂದ ಬಡ ಮಕ್ಕಳಿಗೆ ರೇನ್ ಕೋಟ್

raincoat santa

ಮಳೆಗಾಲ ಆರಂಭವಾಯಿತೆಂದರೆ ಎಲ್ಲರೂ ರೇನ್ ಕೋಟ್, ಛತ್ರಿ ಮುಂತಾದವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಕೈಯಲ್ಲಿ ದುಡ್ಡಿರುವವರೇನೋ ಹೆಚ್ಚಿನ ಬೆಲೆಯ ರೇನ್ ಕೋಟ್, ಛತ್ರಿಗಳನ್ನು ಖರೀದಿಸಿತ್ತಾರೆ. ಆದರೆ ಸ್ಲಮ್ ವಾಸಿಗಳು, ಬಡವರು ಅಷ್ಟೊಂದು ಬೆಲೆಯ ರೇನ್ ಕೋಟ್ ಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಾರೆ.

ಈ ಸಮಸ್ಯೆಯನ್ನು ಬಗೆಹರಿಸಲೆಂದೇ ಡಿಸೈನರ್ ಅನುಜ್ ಶರ್ಮಾ 2010 ರಲ್ಲಿ ‘ಬಟನ್ ಮಸಾಲಾ’ ಪ್ರೊಜೆಕ್ಟ್ ಅನ್ನು ಆರಂಭಿಸಿದರು. ಇದು ಬಡ ಮಕ್ಕಳಿಗೆ ಅತಿ ಕಡಿಮೆ ಬೆಲೆಯಲ್ಲಿ ರೇನ್ ಕೋಟ್ ವಿತರಿಸುವ ಹಾಗೂ ರೇನ್ ಕೋಟ್ ತಯಾರಿಸುವುದನ್ನು ಹೇಳಿಕೊಡುವ ಯೋಜನೆ.

ಅನುಜ್ ಶರ್ಮಾ ಅವರು ಮನೆಗೆ ಮುಚ್ಚುವ ಹುಲ್ಲು, ರಬ್ಬರ್ ಮತ್ತು ಬಟನ್ ನಿಂದ ರೇನ್ ಕೋಟ್ ತಯಾರಿಸುವುದನ್ನು ಹೇಳಿಕೊಡುತ್ತಾರೆ. ಈಗಾಗಲೇ ಇವರು ಸುಮಾರು 18,000 ಮಕ್ಕಳಿಗೆ ರೇನ್ ಕೋಟ್ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ. ಹಾಗಾಗಿ ಜನ ಇವರನ್ನು ‘ರೇನ್ ಕೋಟ್ ಸಂತಾ’ ಎಂದೇ ಕರೆಯುತ್ತಾರೆ. ರೇನ್ ಕೋಟ್ ನ ಹೊರತಾಗಿ ಇವರು ಬ್ಯಾಗ್ ಮತ್ತು ಚಪ್ಪಲಿ ತಯಾರಿಸುವುದನ್ನೂ ಹೇಳಿಕೊಡುತ್ತಾರೆ.

“ಮಕ್ಕಳು ತಾವೇ ತಯಾರಿಸಿದ ರೇನ್ ಕೋಟ್ ಅನ್ನು ಖುಷಿಯಿಂದ ಧರಿಸುತ್ತಾರೆ. ಅವರು ಇದರಿಂದ ಸ್ವಾವಲಂಬಿಗಳಾಗುತ್ತಾರೆ. ಇದೇ ಅವರು ನನಗೆ ಕೊಡುವ ಕಾಣಿಕೆ” ಎನ್ನುತ್ತಾರೆ ಅನುಜ್ ಶರ್ಮಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...