alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹದ ದಿನದಂದೇ ಯುವಕನ ದುರಂತ ಸಾವು

30 ವರ್ಷದ ಆ ಇಂಜಿನಿಯರ್ ವಿವಾಹ ಸಂಜೆ ನೆರವೇರಬೇಕಿತ್ತು ಅದಕ್ಕಾಗಿ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಅದಕ್ಕಾಗಿ ಮಧುಮಗನಾಗಿದ್ದ ಯುವಕನಿಗೆ ಬೆಳಿಗ್ಗೆ ಸಹೋದ್ಯೋಗಿಯಿಂದ ಬಂದ ಮೊಬೈಲ್ ಕರೆ ದುರಂತ ಸಾವಿಗೆ ಕಾರಣವಾಗಿದೆ.

ನೋಯ್ಡಾದಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ನರೇಶ್ ಪಾಲ್ ಸಾವನ್ನಪ್ಪಿದವನಾಗಿದ್ದು, ಭಾನುವಾರ ಸಂಜೆ ಈತನ ವಿವಾಹ ನಡೆಯಬೇಕಿದ್ದ ಕಾರಣ ಬರೇಲಿ ಸಮೀಪದ ತನ್ನ ಗ್ರಾಮಕ್ಕೆ ಬಂದಿದ್ದ.
ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ನರೇಶ್ ಪೋನಿಗೆ ಕರೆ ಬಂದಿದ್ದು, ಅದಕ್ಕೆ ಉತ್ತರಿಸುತ್ತಲೇ ಮತ್ತೊಂದು ಮೊಬೈಲ್ ನಲ್ಲಿ ಮೆಸೇಜ್ ನೋಡಿಕೊಂಡು ಹೊರ ಬಂದಿದ್ದ.

ಈತನ ಮನೆ ಬಳಿಯೇ ರೈಲು ಹಳಿಯಿದ್ದು, ಮೊಬೈಲ್ ನಲ್ಲಿ ಸಂಪೂರ್ಣ ಮಗ್ನನಾಗಿದ್ದ ನರೇಶ್ ಗೆ ವೇಗವಾಗಿ ರೈಲು ಬಂದ ಅರಿವೇ ಇರಲಿಲ್ಲ. ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲು ಆತನಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮದುವೆ ಸಂಭ್ರಮದಲ್ಲಿದ್ದ ಆತನ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬದವರ ರೋದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...