alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಕಚೇರಿಯಲ್ಲಿ ವಿಷ ಸೇವಿಸಿದ್ದ ವ್ಯಾಪಾರಿ ಬದುಕುಳಿಯಲಿಲ್ಲ

ಉತ್ತರಾಖಂಡ್ ಸರ್ಕಾರದ ಕ್ಯಾಬಿನೆಟ್ ಮಂತ್ರಿ ಸುಬೋಧ್ ಯುನಿಯಲ್ ಜನತಾ ದರ್ಬಾರ್ ನಲ್ಲಿ ವಿಷ ಸೇವಿಸಿದ್ದ ವ್ಯಾಪಾರಿ ಪ್ರಕಾಶ್ ಪಾಂಡೆ ಸಾವನ್ನಪ್ಪಿದ್ದಾನೆ. ಸಾರಿಗೆ ಬ್ಯುಸಿನೆಸ್ ನಡೆಸುತ್ತಿದ್ದ ಪ್ರಕಾಶ್ ಗೆ ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಪಾಂಡೆ ಸಾವನ್ನಪ್ಪಿದ್ದಾನೆ.

ಹಲ್ದ್ವಾನಿ ನಿವಾಸಿ ಪ್ರಕಾಶ್ ಜನವರಿ 6ರಂದು ಡೆಹ್ರಾಡೂನ್ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ಜನತಾ ದರ್ಬಾರ್ ಗೆ ಬಂದಿದ್ದ. ಅಲ್ಲಿಯೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಜಿಎಸ್ ಟಿ ಹಾಗೂ ನೋಟು ನಿಷೇಧದಿಂದಾಗಿ ವ್ಯಾಪಾರದಲ್ಲಿ ನಷ್ಟವಾಗಿದೆ ಎಂದು ಪ್ರಕಾಶ್ ಆರೋಪ ಮಾಡಿದ್ದ. ಸ್ಥಳೀಯ ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದ್ದ.

ಪ್ರಕಾಶ್ ಸಾವನ್ನಪ್ಪುತ್ತಿದ್ದಂತೆ ಪರಿಸ್ಥಿತಿ ಹೋರಾಟದ ರೂಪ ಪಡೆದಿದೆ. ಪ್ರಕಾಶ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೀಡಬೇಕು ಹಾಗೇ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಸ್ಥಳೀಯ ಶಾಸಕಿ ಇಂದಿರಾ ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...