alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಯ್ತು ಐಷಾರಾಮಿ ಬಸ್

bus

ತೆಲಂಗಾಣದಲ್ಲಿ 30 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಗೆ ಬೆಂಕಿ ಬಿದ್ದಿದೆ. ಅಲೈರ್ ಬಳಿ ಬರುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಐಷಾರಾಮಿ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ವಾರಂಗಲ್ ನಿಂದ ಹೈದ್ರಾಬಾದ್ ಗೆ ಹೊರಟಿದ್ದ ಬಸ್ ಇದಾಗಿತ್ತು.

ಎಂಜಿನ್ ನಲ್ಲಿ ಬೆಂಕಿಯ ಕಿಡಿ ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ, ಪ್ರಯಾಣಿಕರನ್ನ ಕೆಳಕ್ಕಿಳಿಸಿದ್ದಾನೆ. ಅದಾಗಿ ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದು, ಈ ಬಗ್ಗೆ ವರದಿ ಕೊಡುವಂತೆ ಸಾರಿಗೆ ಸಚಿವ ಪಿ.ಮಹೇಂದರ್ ರೆಡ್ಡಿ ಸೂಚಿಸಿದ್ದಾರೆ. ಕಳೆದ ವಾರ ಉತ್ತರಪ್ರದೇಶದಲ್ಲಿ 70 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಡಬಲ್ ಡೆಕ್ಕರ್ ಬಸ್ ಗೆ ಬೆಂಕಿ ಬಿದ್ದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...