alex Certify
ಕನ್ನಡ ದುನಿಯಾ       Mobile App
       

Kannada Duniya

ನದಿಗುರುಳಿದ ಬಸ್, ತಡವಾಗಿ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಪ್ರಯಾಣಿಕ ಬಸ್ ನದಿಗುರುಳಿದೆ. ಘಟನೆಯಲ್ಲಿ ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದು ಕೆಲವರು ನಾಪತ್ತೆಯಾಗಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಸ್ಥಳೀಯರು ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೋಮಕಾಲ್ ನಿಂದ ಬಸ್ ಬಹ್ರಾಮ್ಪುರಕ್ಕೆ ಹೋಗ್ತಿತ್ತು ಎನ್ನಲಾಗಿದೆ. ದೌಲಾತಾಬಾದ್ ಪೊಲೀಸ್ ಸ್ಟೇಷನ್ ಬಳಿ ನಿಯಂತ್ರಣ ತಪ್ಪಿದ ಬಸ್ ಸೇತುಗೆ ಕೆಳಗೆ ಉರುಳಿದೆ. ಸುದ್ದಿ ತಿಳಿದ ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಬಂದಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಘಟನೆ ನಡೆದ ಅನೇಕ ಸಮಯದ ನಂತ್ರ ಕ್ರೇನ್ ಜೊತೆ ಬಂದ ಪೊಲೀಸರು ರಕ್ಷಣೆ ಶುರುಮಾಡಿದ್ದಾರೆ. ಇದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. ತಡವಾಗಿ ಬಂದ ಪೊಲೀಸರಿಗೆ ಕಲ್ಲು ತೂರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವಾಹನದ ಮೇಲೂ ಸ್ಥಳೀಯರು ಕಲ್ಲು ತೂರಿದ್ದಾರೆ. ಬಸ್ ಚಾಲಕ ಫೋನ್ ನಲ್ಲಿ ಮಾತನಾಡ್ತಿದ್ದ. ಈ ವೇಳೆ ಬಸ್ ನಿಯಂತ್ರಣ ತಪ್ಪಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...