alex Certify
ಕನ್ನಡ ದುನಿಯಾ       Mobile App
       

Kannada Duniya

ಕಮರಿಗೆ ಉರುಳಿದ ಬಸ್: 30 ಮಂದಿ ಸಾವಿಗೀಡಾಗಿರುವ ಶಂಕೆ

meghalaya-map-6ಮೇಘಾಲಯದಲ್ಲಿ ಕಳೆದ ರಾತ್ರಿ ಬಸ್ ಒಂದು ಕಮರಿಗೆ ಉರುಳಿ ಬಿದ್ದಿರುವ ಪರಿಣಾಮ 30 ಮಂದಿ ಸಾವಿಗೀಡಾಗಿರಬಹುದೆಂಬ ಭೀತಿ ವ್ಯಕ್ತವಾಗಿದೆ. 5 ಮಂದಿಯನ್ನು ರಕ್ಷಿಸಲಾಗಿದ್ದರೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಜಿಲ್ಲಾ ಕೇಂದ್ರ ಖಿಲೇರಿಯತ್ ನಿಂದ 60 ಕಿ.ಮೀ. ದೂರದಲ್ಲಿರುವ ಸೋನಾಪುರ್ ಮಂದಿರದ ಬಳಿ ರಾತ್ರಿ 9-45 ರ ಸುಮಾರಿಗೆ ಬಸ್ ಉರುಳಿ ಬಿದ್ದಿದೆ ಎನ್ನಲಾಗಿದ್ದು, ಕತ್ತಲು ಹಾಗೂ ಮಳೆ ಇದ್ದ ಕಾರಣ ರಾತ್ರಿ ಕಾರ್ಯಾಚರಣೆ ನಡೆಸಲು ಸಮಸ್ಯೆಯಾಗಿತ್ತೆನ್ನಲಾಗಿದೆ.

ಇಂದು ಮುಂಜಾನೆಯಿಂದ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಐವರನ್ನು ಹೊರ ತೆಗೆದು ಅವರುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ನತದೃಷ್ಟ ಬಸ್ ನಲ್ಲಿ 35 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಜನವರಿಯಲ್ಲಿ ಇದೇ ಪ್ರದೇಶದಲ್ಲಿ ಬಸ್ ಕಮರಿಗೆ ಉರುಳಿದ್ದ ಪರಿಣಾಮ 11 ಮಂದಿ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...