alex Certify
ಕನ್ನಡ ದುನಿಯಾ       Mobile App
       

Kannada Duniya

ಅಶೋಕ್ ಕುಮಾರ್ ಜಾಮೀನಿಗೆ ಚಂದಾ ನೀಡಿದ ಗ್ರಾಮಸ್ಥರು

ಗುರ್ಗಾಂವ್ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿ ಪ್ರದ್ಯುಮನ್ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದ ಕಂಡಕ್ಟರ್ ಅಶೋಕ್ ಕುಮಾರ್ ಗೆ ಜಾಮೀನು ಸಿಕ್ಕಿದೆ. ಗುರ್ಗಾಂವ್ ಜಿಲ್ಲಾ ನ್ಯಾಯಾಲಯ ಮಂಗಳವಾರ 50 ಸಾವಿರ ರೂಪಾಯಿ ಭದ್ರತಾ ಬಾಂಡ್ ಮೇಲೆ ಜಾಮೀನು ನೀಡಿದೆ.

ಅಶೋಕ್ ಕುಮಾರ್ ಗಾಮರೋಜ್ ಗ್ರಾಮದ ನಿವಾಸಿ. ಅಶೋಕ್ ಕುಮಾರ್ ಗೆ ಆತನ ಪಕ್ಕದ ಮನೆ ಮಹೇಶ್ ರಾಘವ್ ಎಂಬಾತ ಜಾಮೀನು ಕೊಡಿಸಿದ್ದಾನೆ. ತನ್ನ ಜಮೀನು ಪತ್ರವನ್ನು ಕೋರ್ಟ್ ಮುಂದಿಟ್ಟ ಮಹೇಶ್, ಅಶೋಕ್ ಜಾಮೀನು ಪತ್ರಕ್ಕೆ ಸಹಿಹಾಕಿದ್ದಾನೆ.

ಅಶೋಕ್ ಹಾಗೂ ಮಹೇಶ್ ಮನೆ ಅಕ್ಕಪಕ್ಕದಲ್ಲಿದೆ. ಅಶೋಕ್ ನಿರ್ದೋಷಿ ಎಂಬುದು ನಮಗೆಲ್ಲ ಗೊತ್ತು. ಗ್ರಾಮದ ಜನರು ಅಶೋಕ್ ಜೊತೆಗಿದ್ದಾರೆ. ಅಶೋಕ್ ಗೆ ಸಹಾಯ ಮಾಡಲು ಗ್ರಾಮದವರೆಲ್ಲ ಮುಂದಾಗಿದ್ದಾರೆ. ಸಾಧ್ಯವಾದಷ್ಟು ಹಣವನ್ನು ಅಶೋಕ್ ಗೆ ನೀಡಿದ್ದಾರೆ. ಕೆಲವರು ನೂರು ರೂಪಾಯಿ ನೀಡಿದ್ರೆ ಮತ್ತೆ ಕೆಲವರು 50, 20 ರೂಪಾಯಿ ನೀಡಿ ಸಹಾಯ ಮಾಡಿದ್ದಾರೆ ಎಂದು ಮಹೇಶ್ ಹೇಳಿದ್ದಾನೆ.

ಸೆಪ್ಟೆಂಬರ್ 8 ರಂದು ಪ್ರದ್ಯುಮನ್ ಕೊಲೆ ಪ್ರಕರಣದಲ್ಲಿ ಅಶೋಕ್ ಕುಮಾರ್ ನನ್ನು ಬಂಧಿಸಲಾಗಿತ್ತು. ಆದ್ರೆ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಕೋರ್ಟ್ ಜಾಮೀನು ನೀಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...