alex Certify
ಕನ್ನಡ ದುನಿಯಾ       Mobile App
       

Kannada Duniya

11 ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ದೆಹಲಿ ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಸಿಕ್ತಿದೆ. ಪೊಲೀಸರು ಈವರೆಗೆ 130 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ನೇಣು ಬಿಗಿದುಕೊಳ್ಳಲು ಭಾಟಿಯಾ ಕುಟುಂಬ ತಂದಿದ್ದ ದುಪಟ್ಟಾಗಳು ಎಲ್ಲಿಯವು ಎಂಬುದನ್ನು ಪತ್ತೆ ಹಚ್ಚಲಾಗ್ತಿದೆ. ಈ ಮಧ್ಯೆ ಕಿರಿ ಸಹೋದರ ಲಲಿತ್ ಆತ್ಮಹತ್ಯೆಗೆ ಪ್ಲಾನ್ ರೂಪಿಸಿದ್ದ. ಆದ್ರೆ ಹಿರಿಯಣ್ಣ ಭುವನೇಶ್ ಗೆ ಇದು ಒಪ್ಪಿಗೆಯಿರಲಿಲ್ಲ ಎಂಬ ಸತ್ಯ ಗೊತ್ತಾಗಿದೆ.

ಭುವನೇಶ್ ಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಮನೆಯವರ ಒತ್ತಾಯಕ್ಕೆ ಮಣಿದು ನೇಣು ಬಿಗಿದುಕೊಂಡಿದ್ದಾನೆ. ಆದ್ರೆ ಕೊನೆಯವರೆಗೂ ಜೀವ ಉಳಿಸಿಕೊಳ್ಳಲು ಹೋರಾಡಿದ್ದಾನೆ. ಎಲ್ಲರಂತೆ ಭುವನೇಶ್ ಕೈ ಹಾಗೂ ಕಾಲನ್ನು ಕಟ್ಟಲಾಗಿತ್ತು. ಆದ್ರೆ ಭುವನೇಶ್ ಕೈ ಬಿಚ್ಚಿಕೊಂಡು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಲಲಿತ್ ಕನಸಿನಲ್ಲಿ ಬಂದಿದ್ದ ತಂದೆ ಮನೆಯ ಹೊರಗಿನಿಂದ ಆಹಾರ ತನ್ನಿ ಎಂದು ಸೂಚನೆ ನೀಡಿದ್ದನಂತೆ. ಮನೆಯಲ್ಲಿ ಯಜ್ಞ ಮಾಡಿ ನಂತ್ರ ಆತ್ಮಹತ್ಯೆ ಮಾಡಿಕೊಳ್ಳಿ ಎಂದಿದ್ದನಂತೆ. ಸಾಯುವ ಇಚ್ಛೆ ಯಾರಿಗೂ ಇರಲಿಲ್ಲ. ಮೋಕ್ಷ ಪಡೆಯಲು ಮುಂದಾಗಿದ್ದರು. ಸತ್ತ 11 ದಿನಕ್ಕೆ ವಾಪಸ್ ಬರ್ತೇವೆಂದು ನಂಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ ಲಲಿತ್ ಮನೆ ನಿರ್ಮಾಣ ಮಾಡಿದ್ದ ಗುತ್ತಿಗೆದಾರನ ಸಹೋದರಿ ಗೀತಾ ಮಾ ಎಂಬಾಕೆಯನ್ನು ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯೇ ಇದಕ್ಕೆಲ್ಲ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಆಕೆ ಮಾತ್ರ ಭಾಟಿಯಾ ಕುಟುಂಬಸ್ಥರ ಸಂಪರ್ಕ ಹೊಂದಿರಲಿಲ್ಲ ಎಂದಿದ್ದಾಳೆ. ಭಾಟಿಯಾ ಕುಟುಂಬ ಸಾಯುವ ಮುನ್ನ ಗುತ್ತಿಗೆದಾರ ನಂಬರ್ ಗೆ ಕೊನೆಯದಾಗಿ ಫೋನ್ ಮಾಡಿತ್ತು ಎನ್ನಲಾಗಿದೆ. ಗೀತಾ ಮಾ ವಿಚಾರಣೆ ನಡೆಯುತ್ತಿದ್ದು, ಸತ್ಯ ಹೊರಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...