alex Certify
ಕನ್ನಡ ದುನಿಯಾ       Mobile App
       

Kannada Duniya

ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ಮತ್ತೊಂದು ಟ್ವಿಸ್ಟ್

ಜೂನ್ 30 ರಂದು ನವದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಂದು ಹೊಸ ವಿಷಯ ಬೆಳಕಿಗೆ ಬಂದಿದೆ. ಈ ಕುಟುಂಬ ಸದಸ್ಯರ ಪೈಕಿ ಓರ್ವರು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಚಿಸಿರಲಿಲ್ಲ ಅನ್ನೋದು ಈಗ ಬಹಿರಂಗವಾಗಿದೆ.

ಲಲಿತ್ ಅವರ ಅಣ್ಣ ಭುವನೇಶ್ ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಚಿಸಿರಲಿಲ್ಲ ಎನ್ನಲಾಗ್ತಿದೆ. ಭುವನೇಶ್ ಅವರ ದೇಹ ಇದ್ದ ಸ್ಥಿತಿಯನ್ನು ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದಾರೆ. ಸಾಮೂಹಿಕ ಆತ್ಮಹತ್ಯೆ ದಿನದ ಎಲ್ಲ ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ. ಅಂದು ಭುವನೇಶ್ ಗೆ ಆತ್ಮಹತ್ಯೆ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲವೆಂಬುದು ಈಗ ಬೆಳಕಿಗೆ ಬಂದಿದೆ. ಆತ್ಮಹತ್ಯೆಯ ಸ್ವಲ್ಪ ಸಮಯದ ಮುನ್ನ ಈ ವಿಷಯ ತಿಳಿದಿದೆ ಎನ್ನಲಾಗ್ತಿದೆ.

ಆತ್ಮಹತ್ಯೆ ಪ್ರಕರಣ ಸಂಭವಿಸಿದ ದಿನ ಭುವನೇಶ್ ಅವರ ಅಂಗಡಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.45 ವರೆಗೂ ತೆರೆದಿತ್ತು ಅನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಭುವನೇಶ್, ಕುತ್ತಿಗೆಗೆ ಬಿಗಿದಿರುವ ಹಗ್ಗವನ್ನು ತೆಗೆಯಲು ಪ್ರಯತ್ನಿಸಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...