alex Certify
ಕನ್ನಡ ದುನಿಯಾ       Mobile App
       

Kannada Duniya

ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಅಂಟಿಕೊಳ್ತು ಪ್ರೇಮ ಪ್ರಸಂಗದ ನಂಟು…?

ದೆಹಲಿ ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತಂತ್ರ-ಮಂತ್ರ ಆತ್ಮಹತ್ಯೆಗೆ ಕಾರಣ ಎಂದುಕೊಂಡಿದ್ದ ಪೊಲೀಸರಿಗೆ ಈಗ ಮತ್ತೊಂದು ಮೂಲ ಸಿಕ್ಕಿದೆ. ಲಲಿತ್ ಸೋದರ ಸೊಸೆ ಪ್ರಿಯಾಂಕ ಡೈರಿ ಬೇರೆ ಕಥೆಯನ್ನು ಹೇಳ್ತಿದೆ. ಭಾಟಿಯಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಪ್ರೇಮ ಪ್ರಸಂಗದ ನಂಟು ಅಂಟಿಕೊಂಡಿದೆ.

ಪ್ರಿಯಾಂಕ ಡೈರಿಯ ಮೊದಲ ಪುಟದಲ್ಲಿ ಹೃದಯದ ಚಿಹ್ನೆಯಿದೆ. ಬೆಳ್ಳಿ ಬಣ್ಣದ ಪೇಪರ್ ನಲ್ಲಿ ಹೃದಯದ ಚಿತ್ರ ಬಿಡಿಸಲಾಗಿದೆ. ಇದ್ರ ಜೊತೆಗೆ ಮಾಡಲ್ ಟೌನ್ ನ ಯುವಕನೊಬ್ಬನ ಹೆಸರನ್ನು ಪ್ರಿಯಾಂಕ ಬರೆದಿದ್ದಾಳೆ. ಆತನನ್ನು ಪ್ರೀತಿಸುತ್ತಿದ್ದ ಪ್ರಿಯಾಂಕ ಡೈರಿಯಲ್ಲಿ ಪ್ರೀತಿ ಹಾಗೂ ನಿಕಟ ಸಂಬಂಧದ ಬಗ್ಗೆ ಬರೆದಿದ್ದಾಳೆ. ಜೊತೆಗೆ ಮಾವ ಲಲಿತ್ ಕ್ಷಮೆ ಕೋರಿದ್ದಾಳೆ.

ಪೊಲೀಸರು ಹುಡುಗನ ಹುಡುಕಾಟ ಶುರು ಮಾಡಿದ್ದಾರೆ. ಆತನ ವಿಚಾರಣೆ ನಂತ್ರ ಮತ್ತೊಂದಿಷ್ಟು ವಿಷ್ಯಗಳು ಹೊರಗೆ ಬರುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...