alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಆರು ದಿನ ಮೊದಲು ಸ್ಟೂಲ್, ಹಗ್ಗ ತಂದು ಪ್ರ್ಯಾಕ್ಟೀಸ್ ಮಾಡಿದ್ರು…!

ಬುರಾರಿಯಲ್ಲಿ ನಡೆದ ಭಾಟಿಯಾ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತಷ್ಟು ಸಂಗತಿಯನ್ನು ಕಲೆ ಹಾಕಿದ್ದಾರೆ. ಭಾಟಿಯಾ ಮನೆ ಪಕ್ಕದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿಯಲ್ಲಿ ಕೆಲವೊಂದು ಸಂಗತಿಗಳು ಸೆರೆಯಾಗಿವೆ. ಭಾಟಿಯಾ ಕುಟುಂಬ ಆತ್ಮಹತ್ಯೆಗೂ ಆರು ದಿನ ಮೊದಲು ಸ್ಟೂಲ್ ಹಾಗೂ ಹಗ್ಗವನ್ನು ತಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾಟಿಯಾ ಕುಟುಂಬದ ಹಿರಿಯ ಸೊಸೆ ಹಾಗೂ ಆಕೆ ಮಗಳು ಆರು ಸ್ಟೂಲ್ ಗಳನ್ನು ಮನೆಗೆ ತಂದಿದ್ದಾರೆ. ಹಗ್ಗವನ್ನೂ ಮನೆಗೆ ತಂದಿದ್ದಾರೆ. ಸತತ ಆರು ದಿನಗಳ ಕಾಲ ಆಲದ ಮರದ ಬೇರಿನಂತೆ ಜೋತು ಬೀಳುವುದನ್ನು ಪ್ರ್ಯಾಕ್ಟೀಸ್ ಮಾಡಿದ್ದಾರೆ. ನಂತ್ರ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಕಿರಿಯ ಮಗ ಲಲಿತ್ ಡೈರಿ ಪೊಲೀಸರಿಗೆ ಸಿಕ್ಕಿದ್ದು, ಅದ್ರಲ್ಲಿ ಕೆಲವೊಂದು ಅಂಕಿ-ಅಂಶಗಳಿವೆ. ಲಲಿತ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಆತನ ತಂದೆ ಕನಸಿನಲ್ಲಿ ಬರ್ತಿದ್ದ. ಅದನ್ನು ಡೈರಿಯಲ್ಲಿ ಬರೆಯುತ್ತಿದ್ದ ಎಂಬ ಸಂಶಯವೂ ಇದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಘಟನೆ ಬಗ್ಗೆ ತನಿಖೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...