alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ನಂತ್ರವೂ ಜೀವಂತವಾಗಿರಲಿದ್ದಾರೆ 11 ಮಂದಿ

ರಾಷ್ಟ್ರ ರಾಜಧಾನಿ ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅವ್ರ ಆತ್ಮಹತ್ಯೆಗೆ ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಪ್ರಕರಣದ ಬಗ್ಗೆ ಗಂಟೆಗೊಂದು ಮಾಹಿತಿ ಹೊರ ಬರ್ತಿದೆ.

ಮೃತ 11 ಮಂದಿ ತುಂಬಾ ಸ್ನೇಹಮಯಿ ಹಾಗೂ ಪ್ರಾಮಾಣಿಕರಾಗಿದ್ದರಂತೆ. ಕುಟುಂಬಸ್ಥರು ಧಾರ್ಮಿಕ ಪ್ರವೃತ್ತಿ ಹೊಂದಿದ್ದರಂತೆ. ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದರಂತೆ. ಇದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. 11 ಮಂದಿ ಸಾವಿಗೆ ಶರಣಾದ ಸ್ಥಳದಲ್ಲಿ ಒಂದು ನೋಟ್ ಸಿಕ್ಕಿದೆ. ಎಲ್ಲ 11 ಮಂದಿ ಕಣ್ಣನ್ನು ದಾನ ಮಾಡುವಂತೆ ಅದ್ರಲ್ಲಿ ಬರೆದಿದೆ. ಭಾಟಿಯಾ ಕುಟುಂಬದ ಕೊನೆ ಆಸೆಯಂತೆ ಎಲ್ಲ 11 ಮಂದಿಯ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಲಾಗಿದೆ.

ಸೋಮವಾರ ಸಂಜೆ 11 ಮಂದಿಯ ಅಂತ್ಯ ಸಂಸ್ಕಾರ ನಡೆಯಲಿದೆ. ಸತ್ತ ನಂತ್ರವೂ ಕುಟುಂಬದ ಸದಸ್ಯರ ಕಣ್ಣು ಮಾತ್ರ ಜೀವಂತವಾಗಿರಲಿದೆ. ಇವ್ರ ಸಾವಿಗೆ ತಂತ್ರ-ಮಂತ್ರ ಕಾರಣ ಎನ್ನಲಾಗ್ತಿದೆ. ಈ ಬಗ್ಗೆ ಎಸ್ ಡಿ ಎಂ ತನಿಖಾ ವರದಿಯನ್ನು ಅಪರಾಧ ವಿಭಾಗಕ್ಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...