alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕಾಗಿ ಜಪಾನೀಸ್ ಭಾಷೆ ಕಲಿಯುತ್ತಿದ್ದಾರೆ ರೈಲು ಸಿಬ್ಬಂದಿ

ಮುಂಬೈ ಮತ್ತು ಅಹಮದಾಬಾದ್ ನಡುವೆ ಚಲಿಸಲಿರುವ ಬುಲೆಟ್ ಟ್ರೈನ್ ಗಾಗಿ ಕೇವಲ ತಂತ್ರಜ್ಞಾನವನ್ನಷ್ಟೇ ಭಾರತ ಜಪಾನ್ ನಿಂದ ಪಡೀತಿಲ್ಲ. ಜಪಾನ್ ಸಂಸ್ಕೃತಿ ಮತ್ತು ಭಾಷೆಯನ್ನು ಕೂಡ ಭಾರತೀಯರು ಕಲೀತಿದಾರೆ. ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೊರೇಷನ್ ನ ಸಿಬ್ಬಂದಿ ಈಗ ವಿಶ್ವದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಒಂಭತ್ತನೆ ಭಾಷೆಯಾದ ಜಪಾನಿನ ಭಾಷೆಯನ್ನು ಕಲಿಯುತ್ತಿದ್ದಾರೆ.

ವಾರದಲ್ಲಿ ಮೂರು ದಿನ ಸಂಜೆ 5.30 ರಿಂದ 6.30 ರ ವರೆಗೆ ಒಂದು ಗಂಟೆಯ ಅವಧಿಯಲ್ಲಿ ಸಿಬ್ಬಂದಿ ಜಪಾನೀ ಭಾಷೆಯ ತರಗತಿಗೆ ಹಾಜರಾಗುತ್ತಿದ್ದಾರೆ. ಮ್ಯಾನೇಜಿಂಗ್ ಡೈರೆಕ್ಟರ್ ರಿಂದ ಹಿಡಿದು ಕಟ್ಟಕಡೆಯ ಉದ್ಯೋಗಿ ಕೂಡ ಜಪಾನಿ ಭಾಷೆ ಕ್ಲಾಸ್ ಗೆ ಹಾಜರಾಗುತ್ತಿದ್ದಾರೆ. ಜಪಾನಿ ಭಾಷೆಯ ತರಗತಿಗಳನ್ನ ಉದ್ಯೋಗಿಗಳು ತಪ್ಪಿಸುವ ಹಾಗಿಲ್ಲ ಅಂತ ಸಿಬ್ಬಂದಿಗೆ ಆದೇಶ ಜಾರಿ ಮಾಡಲಾಗಿದೆ.

ಪಠ್ಯಪುಸ್ತಕ ಸಮೇತವಾಗಿ ತರಗತಿಗಳಿಗೆ ಹಾಜರಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಜಪಾನ್ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವ ಮತ್ತು ಗೌರವ ಸೂಚಿಸುವ ಬಗ್ಗೆ ನಿರ್ದೇಶನಗಳನ್ನ ನೀಡಲಾಗ್ತಿದೆ. ಬುಲೆಟ್ ಟ್ರೈನ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೆಟ್ರೋ ಟ್ರೈನ್ ನ ಮುಂದಿನ ತರಬೇತಿಗಾಗಿ ಸಿಬ್ಬಂದಿ ಜಪಾನ್ ಗೆ ತೆರಳಬೇಕಿದೆ. ಮೊದಲ ಹಂತದಲ್ಲಿ ಪಾಸ್ ಆದ ಸಿಬ್ಬಂದಿಯನ್ನಷ್ಟೇ ಎರಡನೇ ಹಂತಕ್ಕೆ ಆಯ್ಕೆ ಮಾಡೋದಕ್ಕೆ ನಿರ್ಧರಿಸಲಾಗಿದೆ.

ಪ್ರತಿ ಪಠ್ಯದ ನಂತರದಲ್ಲಿ ಸಿಬ್ಬಂದಿಗೆ ಪರೀಕ್ಷೆಗಳನ್ನ ನೀಡಲಾಗ್ತಿದೆ. ಅದರಲ್ಲಿ ಸಿಬ್ಬಂದಿ ಸ್ಕೋರ್ ಮಾಡುವ ಅಂಕಗಳನ್ನ ಅವರ ಕೆಲಸದ ಗುಣಮಟ್ಟದ ಪರೀಕ್ಷೆಯ ಅಂಕಗಳಾಗಿ ನಿರ್ಧರಿಸಲಾಗುತ್ತಿದೆ. ದೆಹಲಿಯ ಜಪಾನ್ ರಾಯಭಾರ ಕಚೇರಿಯಿಂದಲೇ ಜಪಾನಿ ಬಾಷೆಯನ್ನ ಕಲಿಸೋಕೆ ಶಿಕ್ಷಕರನ್ನು ನಿಯೋಜಿಸಿದೆಯಂತೆ. ಕಾಫಿ ಮತ್ತು ಲಂಚ್ ಬ್ರೇಕ್ ಗಳಲ್ಲಿ ಸಿಬ್ಬಂದಿ ಜಪಾನಿ ಭಾಷೆಯಲ್ಲಿ ವ್ಯವಹರಿಸುವಂತೆ ಸೂಚನೆ ನೀಡಲಾಗಿದೆ. ಇದೇ ಅಕ್ಟೋಬರ್ನಲ್ಲಿ ಬುಲೆಟ್ ರೈಲು ಸಿಬ್ಬಂದಿಯ ಮೊದಲ ತಂಡ ತರಬೇತಿಗಾಗಿ ಜಪಾನ್ ಗೆ ತೆರಳಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...