alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಿನ ಬುಲೆಟ್ ರೈಡಿಂಗ್ ಕಂಡು ಮಧುಮಗ ಸುಸ್ತೋ ಸುಸ್ತು

bullet rani

ಅಹಮದಾಬಾದ್: ಮದುವೆ ಎಂದರೆ ಸಡಗರ, ಸಂಭ್ರಮ ಸಹಜವಾಗಿ ಮನೆ ಮಾಡಿರುತ್ತದೆ. ಮನೆಯಿಂದ ಮದುವೆ ಮನೆಗೆ ಮಧುಮಗಳನ್ನು ಮೆರವಣಿಗೆಯಲ್ಲಿ ಇಲ್ಲವೇ ಡೋಲಿ, ವಾಹನಗಳಲ್ಲಿ ಕರೆದುಕೊಂಡು ಬರಲಾಗುತ್ತದೆ. ಆದರೆ, ಇಲ್ಲೊಬ್ಬ ಮಧುಮಗಳು ಬುಲೆಟ್ ನಲ್ಲಿ ಮದುವೆ ಮನೆಗೆ ಬಂದಿದ್ದಾರೆ.

ಆಯೇಷಾ ಎಂಬ ಯುವತಿಗೆ ಮದುವೆ ಫಿಕ್ಸ್ ಆಗಿದ್ದು, ಆಕೆಯ ಸಹೋದರ ಮಧುಮಗನಿಗೆ ಬುಲೆಟ್ ಕೊಡಿಸಿದ್ದರು. ಆದರೆ ಮಧುಮಗನಿಗೆ ಬುಲೆಟ್ ಓಡಿಸಲು ಬರುತ್ತಿರಲಿಲ್ಲ. ಮದುವೆ ದಿನ ಕಲ್ಯಾಣ ಮಂಟಪಕ್ಕೆ ನಾನು ಬುಲೆಟ್ ನಲ್ಲಿ ಬರುತ್ತೇನೆ ಎಂದ ಆಯೇಷಾ ಆಸೆಗೆ ಮನೆಯವರು ಅಸ್ತು ಎಂದಿದ್ದಾರೆ. ಮಧುಮಗಳು ಆಯೇಷಾ ಬುಲೆಟ್ ಏರಿ ಮನೆಯಿಂದ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಇದನ್ನು ಕಂಡ ಅಲ್ಲಿದ್ದವರು ಅಚ್ಚರಿಯಿಂದ ನೋಡಿದ್ದಾರೆ.

ಆಯೇಷಾಗೆ ಆಕೆಯ ಸಹೋದರ ಬುಲೆಟ್ ಓಡಿಸುವುದನ್ನು ಕಲಿಸಿದ್ದು, ಸ್ವಲ್ಪವೂ ಅಳುಕಿಲ್ಲದೇ ಆಯೇಷಾ ಮನೆಯಿಂದ ಮದುವೆ ಮನೆವರೆಗೆ ರಾಜ ಗಾಂಭೀರ್ಯದಿಂದ ಬುಲೆಟ್ ರೈಡ್ ಮಾಡಿದ್ದಾರೆ. ತನ್ನ ಪತಿಗೂ ಬುಲೆಟ್ ಓಡಿಸುವುದನ್ನು ಕಲಿಸುತ್ತೇನೆ ಎಂದು ಹೇಳಿದ್ದಾರೆ. ಆಯೇಷಾ ಬುಲೆಟ್ ಓಡಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...