alex Certify
ಕನ್ನಡ ದುನಿಯಾ       Mobile App
       

Kannada Duniya

ಆಕರ್ಷಣೆಯಲ್ಲಿ ಹಾರ್ಲೆಯನ್ನೂ ಹಿಂದಿಕ್ಕುತ್ತಿದೆ ಬುಲೆಟ್..!

image41

ನವದೆಹಲಿ: ಯುವ ಜನಾಂಗವನ್ನು ಅತಿಯಾಗಿ ಆಕರ್ಷಿಸುತ್ತಿರುವ ರಾಯಲ್ ಎನ್ ಫೀಲ್ಡ್ (ಬುಲೆಟ್) ಬೈಕುಗಳು ಹಾರ್ಲೆ ಡೇವಿಡ್ ಸನ್ ಬೈಕುಗಳನ್ನೂ ಹಿಂದಿಕ್ಕುತ್ತಿದೆ.

ಬೆಲೆ ಹಾಗೂ ಆಕರ್ಷಕ ವಿನ್ಯಾಸಕ್ಕಾಗಿ ರಾಯಲ್ ಎನ್ ಫೀಲ್ಡ್ ಬೈಕುಗಳನ್ನು ಕೊಳ್ಳಲು ಜನತೆ ಮುಂದಾಗಿದ್ದು, ರಾಯಲ್ ಎನ್ ಫೀಲ್ಡ್ ಬೆಲೆ ಆಂದಾಜು 2 ಲಕ್ಷ ರೂ. ಗಳಿದ್ದರೆ, ಹಾರ್ಲೆ ಡೇವಿಡ್ ಸನ್ ಗಳ ಬೆಲೆ 5 ಲಕ್ಷ ರೂ. ಗಳಿಂದ ಆರಂಭವಾಗುತ್ತವೆ. ಅಲ್ಲದೇ ರಾಯಲ್ ಎನ್ ಫೀಲ್ಡ್ ಯಾವುದೇ ವಿದೇಶಿ ಬೈಕುಗಳಿಗೂ ಕಮ್ಮಿಯಿಲ್ಲದಂತೆ ಹೊಸ ವಿನ್ಯಾಸದಲ್ಲಿ ಮನ ಸೆಳೆಯುತ್ತಿದೆ.

ಬೈಕುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರಣ ವಿದೇಶಿ ಮಾರುಕಟ್ಟೆಗೂ ಲಗ್ಗೆ ಹಾಕಲು ರಾಯಲ್ ಎನ್ ಫೀಲ್ಡ್ ತಯಾರಿಕಾ ಕಂಪನಿ ಸಜ್ಜಾಗಿದ್ದು, ಇದಕ್ಕಾಗಿ ತನ್ನ ಬೈಕುಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...