alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನಿಗೆ ಮಕ್ಕಳಿಂದ ಮರೆಯಲಾಗದ ಪಾಠ

telangan-tecr

ಹೈದರಾಬಾದ್: ತರಗತಿಯಲ್ಲಿ ಪಾಠ ಮಾಡುವ ಬದಲು ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕನಿಗೆ ಮಕ್ಕಳು ಮರೆಯಲಾಗದ ಪಾಠ ಕಲಿಸಿದ್ದಾರೆ.

ತೆಲಂಗಾಣ ಮೆಹಬೂಬ್ ನಗರದ ಮಿಡ್ಜಿಲ್ ಮಂಡಲ್ ನ ಸರ್ಕಾರಿ ಶಾಲೆಯ ಶಿಕ್ಷಕ ರಾಮುಲು ಪಾಠ ಮಾಡದೇ ನಿದ್ದೆ ಮಾಡುತ್ತಿದ್ದ.

ಇತ್ತೀಚೆಗೆ ಇದೇ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, 5 ನೇ ತರಗತಿ ಮಕ್ಕಳಿಗೆ ಪೋಷಕರ ಹೆಸರನ್ನು ಬರೆಯುವಂತೆ ತಿಳಿಸಿದ್ದರು. ಆದರೆ, ಒಬ್ಬ ವಿದ್ಯಾರ್ಥಿಗೂ ಸರಿಯಾಗಿ ಹೆಸರು ಬರೆಯಲು ಬಾರದ ಕಾರಣ, ಕೆಲ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಈ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ದೂರು ಆಗಾಗ ಕೇಳಿ ಬಂದ ಹಿನ್ನಲೆಯಲ್ಲಿ, ಶಿಕ್ಷಣ ಇಲಾಖೆ ಕೂಡ ನಿಗಾ ವಹಿಸಿದೆ. ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡದೇ ನಿದ್ದೆ ಮಾಡುತ್ತಿದ್ದ ಶಿಕ್ಷಕ ರಾಮುಲು ಫೋಟೋ ತೆಗೆದ ವಿದ್ಯಾರ್ಥಿಯೊಬ್ಬ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳಿಸಿದ್ದಾನೆ. ಕ್ರಮ ಕೈಗೊಂಡಿರುವ ಅಧಿಕಾರಿಗಳು ರಾಮುಲುನನ್ನು ಅಮಾನತು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...