alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕಂತಸ್ತಿನ ಕಟ್ಟಡ ಕುಸಿದು 12 ಸಾವು

building_mumbai_1500971817_618x347

ಮುಂಬೈನ ಘಾಟ್ಕೋಪರ್ ನಲ್ಲಿ ಮಂಗಳವಾರ ನಾಲ್ಕು ಮಹಡಿ ಕಟ್ಟಡ ಕುಸಿದಿದೆ. ದುರ್ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದು, ಅವಶೇಷದಡಿ ಇನ್ನಷ್ಟು ಜನರು ಹುದುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆ ರಕ್ಷಣಾ ಕಾರ್ಯ ಮುಂದುವರೆಸಿದ್ದು, ಈವರೆಗೆ 9 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದೆ.

ಕಟ್ಟಡ ತುಂಬಾ ಹಳೆಯದಾಗಿತ್ತು. ಒಂದೇ ಸಮನೆ ಮಳೆ ಸುರಿದಿದ್ದರಿಂದ ಶಿಥಿಲಗೊಂಡ ಕಟ್ಟಡ ಕುಸಿದು ಬಿದ್ದಿದೆ. ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗ್ತಿದೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ಶುರುಮಾಡಿದ್ದರು. ನಂತ್ರ ಸ್ಥಳಕ್ಕೆ ಬಂದ ವಿಪತ್ತು ನಿರ್ವಹಣಾ ಪಡೆ ರಕ್ಷಣೆ ಕಾರ್ಯ ಮುಂದುವರೆಸಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 12 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...