alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸುತ್ತಿದ್ದಂತೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂ. ಇಳಿಕೆಯಾಗಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮಾಹಿತಿಯೊಂದು ಇಲ್ಲಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಇಳಿಕೆ ಮಾಡಿದ್ದರೂ. ರಸ್ತೆ ಮತ್ತು ಮೂಲ ಸೌಕರ್ಯ ಹೆಸರಲ್ಲಿ 8 ರೂ. ಹೊಸ ಸೆಸ್ ಹಾಕುವ ಮೂಲಕ ದರವನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ.

ಅಬಕಾರಿ ಸುಂಕ 2 ರೂ., ರೋಡ್ ಸೆಸ್ 6 ರೂ. ಇಳಿಕೆಯಾಗಿದ್ದರೆ, 8 ರೂ. ಕಡಿಮೆಯಾಗುತ್ತಿತ್ತು. ಆದರೆ, ರಸ್ತೆ ಮತ್ತು ಮೂಲ ಸೌಕರ್ಯದ ಹೆಸರಿನಲ್ಲಿ 8 ರೂ. ಹೊಸ ಸೆಸ್ ಜಾರಿಗೆ ತರುವ ಪ್ರಸ್ತಾಪವಿದೆ.

ಹೀಗಾಗಿ 8 ರೂ. ಕಡಿಮೆಯಾದಂತೆ ಅನಿಸಿದರೂ, ಹೊಸ ಸೆಸ್ ಮೂಲಕ ಅದನ್ನು ಪಡೆಯಲಾಗುತ್ತದೆ. ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗದೇ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಈಶಾನ್ಯ ರಾಜ್ಯಗಳ 4 ರಿಫೈನರಿಗಳಿಂದ ಉತ್ಪಾದನೆಯಾಗುವ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ ಹೆಚ್ಚುವರಿಯಾಗಿ 4 ರೂ. ಮೂಲ ಸೌಕರ್ಯ ಸೆಸ್ ವಿಧಿಸುವ ಪ್ರಸ್ತಾಪವೂ ಬಜೆಟ್ ನಲ್ಲಿದೆ. ಹೀಗಾಗಿ ತೈಲ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...