alex Certify
ಕನ್ನಡ ದುನಿಯಾ       Mobile App
       

Kannada Duniya

ಜೇಟ್ಲಿ ಬಜೆಟ್ ನಲ್ಲಿ ಇಳಿದಿದ್ದೇನು.? ಏರಿಕೆಯಾಗಿದ್ದೇನು..?

jaitley_2756377g

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಗ್ಗದ ಜನಪ್ರಿಯ ಯೋಜನೆಗಳನ್ನು ಘೋಷಿಸದಿದ್ದರೂ ಸಹ ದೇಶದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ದಿ ಪೂರಕ ಕೇಂದ್ರ ಬಜೆಟ್ ಮಂಡಿಸಲು ಸಫಲರಾಗಿದ್ದಾರೆ.

ಸಾಮಾನ್ಯ ಹಾಗೂ ಮಧ್ಯಮ ವರ್ಗಕ್ಕೆ ಈ ಬಜೆಟ್ ನಿರಾಶಾದಾಯಕ ಎನಿಸಿದರೂ ಸಹ ಎಲ್ಲ ವಲಯಗಳಿಗೆ ಸಮಾನ ಆದ್ಯತೆ ನೀಡಿರುವುದು ಸ್ಪಷ್ಟವಾಗಿದ್ದು, ಆ ಮೂಲಕ ಹೆಚ್ಚು ಹೊರೆಯೂ ಅಲ್ಲದ ಬಜೆಟ್ ಮಂಡಿಸಿದ್ದಾರೆ.

ಏರಿದ್ದೇನು..?
ಐಷಾರಾಮಿ ಕಾರುಗಳ ಮೇಲೆ ಶೇ.4 ರಷ್ಟು ಸುಂಕ ಹೆಚ್ಚಳ.
10 ಲಕ್ಷ ರೂಪಾಯಿಗೂ ಹೆಚ್ಚು ದರದ ಕಾರುಗಳ ಮೇಲೆ ಶುಲ್ಕ.
ಪೆಟ್ರೋಲ್, ಡೀಸೆಲ್ ಕಾರುಗಳ ದರದಲ್ಲಿ ಏರಿಕೆ
ಡಿಸೇಲ್ ವಾಹನಗಳ ಮೇಲೆ ಶೇಕಡ 2 ರಷ್ಟು ಸೆಸ್ ವಿಧಿಸಲಾಗಿದೆ.
ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಶೇ.10 ರಿಂದ 15 ರಷ್ಟು ಹೆಚ್ಚಳ.
ಬ್ರಾಂಡೆಡ್ ಉಡುಪುಗಳು, ಚಿನ್ನಾಭರಣಗಳು, ವಜ್ರಾಭರಣಗಳು ದುಬಾರಿ.
ಇಂಟರ್ನೆಟ್‌, ಎಂಟಿಎಂ, ಬ್ಯಾಂಕಿಂಗ್‌ ಸೇವೆ ದುಬಾರಿ.
ಮೊಬೈಲ್ ಬಿಲ್‌, ಸಿನಿಮಾ, ಕೇಬಲ್, ರೆಸ್ಟೋರೆಂಟ್, ವಿಮಾನ ಟಿಕೆಟ್‌ ದರದಲ್ಲಿ ಏರಿಕೆ.

ಇಳಿದಿದ್ದೇನು..?
50 ಲಕ್ಷದ ಹೊಸ ಮನೆ ಖರೀದಿದಾರರಿಗೆ 50 ಸಾವಿರ ವಿನಾಯಿತಿ.
ಡಯಲಿಸಿಸ್ ಉಪಕರಣಗಳು.
ಅಂಗವಿಕಲರ ಸಹಾಯಕ ಉಪಕರಣಗಳು.
ವಾರ್ಷಿಕ 1 ಕೋಟಿ ತೆರಿಗೆ ಪಾವತಿದಾರರಿಗೆ 3000 ರೂ. ವಿನಾಯಿತಿ.
ಸಿಂಗಲ್ ಪ್ರೀಮಿಯಂ ಪಾವತಿ ಸೇವಾ ತೆರಿಗೆ ಶೇ.3.5 ರಿಂದ 1.5 ಕ್ಕೆ ಇಳಿಕೆ.
ಮನೆ ಬಾಡಿಗೆ ತೆರಿಗೆ ಮೇಲೆ ವಿನಾಯ್ತಿ.
ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ರಿಲೀಫ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...