alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ಹೆಸರಲ್ಲಿ ದೋಖಾ, ವಿದ್ಯಾರ್ಥಿಗೆ 5 ವರ್ಷ ಜೈಲು

ಇಂಟರ್ನೆಟ್ ಮೂಲಕ ಪರಿಚಯವಾಗಿದ್ದ ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದ ಬಿಟೆಕ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 9000 ರೂಪಾಯಿ ದಂಡ ವಿಧಿಸಿದೆ. ಕೋಲ್ಕತ್ತಾದ ತಮ್ಲುಕ್ ನ್ಯಾಯಾಲಯ ಈ ಆದೇಶ ನೀಡಿದೆ.

ನೊಂದ ಯುವತಿಯನ್ನು ಅತ್ಯಾಚಾರ ಸಂತ್ರಸ್ಥೆಯೆಂದು ಪರಿಗಣಿಸಿ ಆಕೆಗೆ ನ್ಯಾಯ ಒದಗಿಸುವಂತೆ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಗೌತಮ್ ಕುಮಾರ್ ನಾಗ್ ಆದೇಶಿಸಿದ್ದಾರೆ. 2017ರ ಜುಲೈ 21ರಂದು ಆರೋಪಿ ಅನಿಮೇಶ್ ಬಾಕ್ಸಿಯನ್ನು ಬಂಧಿಸಲಾಗಿತ್ತು.

ಫೆಬ್ರವರಿ 28ಕ್ಕೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿತ್ತು. ಅತ್ಯಂತ ಶೀಘ್ರವಾಗಿ ಈ ಪ್ರಕರಣ ತೀರ್ಪು ಹೊರಬಿದ್ದಿದೆ. ಮೂರು ವರ್ಷಗಳಿಂದ ಅನಿಮೇಶ್ ಯುವತಿ ಜೊತೆ ಸ್ನೇಹದಿಂದಿದ್ದ. ಅವಳನ್ನು ಮದುವೆ ಆಗುವುದಾಗಿಯೂ ಭರವಸೆ ನೀಡಿದ್ದ.

ತನ್ನ ಜೊತೆಗೆ ದೈಹಿಕ ಸಂಬಂಧ ಹೊಂದದೇ ಇದ್ರೆ ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಆಕೆ ಒಪ್ಪದೇ ಇದ್ದಾಗ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...