alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಸೂಸೈಡ್ ನೋಟ್, BSP ಮುಖಂಡನ ಪುತ್ರ ಆತ್ಮಹತ್ಯೆ

ಬಿಎಸ್ಪಿ ಮುಖಂಡ ಲಾಲ್ಜಿ ವರ್ಮಾ ಅವರ ಪುತ್ರ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಖ್ನೋನ ಗೋಮ್ತಿ ನಗರದಲ್ಲಿರುವ ನಿವಾಸದಲ್ಲೇ ಸಾವಿಗೆ ಶರಣಾಗಿದ್ದಾನೆ. ಆ ಸಮಯದಲ್ಲಿ ಲಾಲ್ಜಿ ವರ್ಮಾ ವಿಧಾನಸಭಾ ಕಲಾಪಕ್ಕೆ ತೆರಳಿದ್ದರು.

ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ವಿಕಾಸ್ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಘಟನೆ ನಡೆದಾಗ ಪತ್ನಿ ಮಾಧುರಿ ಸಿಂಗ್ ಸಹ ಮನೆಯಲ್ಲೇ ಇದ್ರು. ಮಾಧುರಿ ಡ್ರಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡ್ತಾರೆ. ಮಾಧುರಿ ಬೇರೊಂದು ಕೋಣೆಯಲ್ಲಿದ್ರು.

ಆ ಸಮಯದಲ್ಲಿ ವಿಕಾಸ್ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಸದ್ದು ಕೇಳಿ ಮಾಧುರಿ ವಿಕಾಸ್ ಕೋಣೆಗೆ ಓಡಿ ಬಂದ್ರು. ಅಷ್ಟರಲ್ಲಿ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಮಾರ್ಚ್ 12ರಂದು ಸಹ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ವಿಕಾಸ್ ಪ್ರಯತ್ನಿಸಿದ್ದ. ತಾನು ಗ್ಯಾಸ್ಟ್ರೋ ಇಂಟಸ್ಟೈನಲ್ ರೋಗದಿಂದ ಬಳಲುತ್ತಿದ್ದು, ಖಿನ್ನತೆಗೆ ಒಳಗಾಗಿದ್ದೇನೆ, ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆ ಅಂತಾ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...