alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯೆ ಹೇಳಿಕೆ ನೀಡಿದ ಮುಖಂಡನ ನಾಲಿಗೆ ಕತ್ತರಿಸಿದ್ರೆ 50 ಲಕ್ಷ ರೂ.

jannat-dayam

ನವದೆಹಲಿ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿ.ಎಸ್.ಪಿ. ನಾಯಕಿ ಮಾಯಾವತಿ ನಡೆ, ವೇಶ್ಯಾವಾಟಿಕೆಗಿಂತಲೂ ಕಡೆ ಎಂದು ಹೇಳಿಕೆ ನೀಡಿದ್ದ, ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರನ್ನು, ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

ಇಂತಹ ಹೇಳಿಕೆ ನೀಡಿದ ದಯಾಶಂಕರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿ.ಎಸ್.ಪಿ. ನಾಯಕಿಯೊಬ್ಬರು, ದಯಾಶಂಕರ್ ಸಿಂಗ್ ಅವರ ನಾಲಿಗೆಯನ್ನು ಕತ್ತರಿಸಿದಲ್ಲಿ 50 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಚಂಡೀಗಢದ ಬಹುಜನ ಸಮಾಜವಾದಿ ಪಕ್ಷದ ಪ್ರಮುಖ ನಾಯಕಿಯಾಗಿರುವ ಜನ್ನತ್ ಜಾಹನ್ ಅವರು, ನಮ್ಮ ಪಕ್ಷದ ಅಧಿನಾಯಕಿಯಾಗಿರುವ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ ದಯಾಶಂಕರ್ ಸಿಂಗ್ ಅವರ ನಾಲಿಗೆ ಕತ್ತರಿಸಿದವರಿಗೆ 50 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದ್ದಾರೆ.

ದಯಾಶಂಕರ್ ಸಿಂಗ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ, ಬಿ.ಎಸ್.ಪಿ. ಕಾರ್ಯಕರ್ತರು ವಿವಿಧ ಕಡೆ ಪ್ರತಿಭಟನೆ ನಡೆಸಿದ್ದಾರೆ. ಮಾಯಾವತಿ ಕೂಡ ಇಂತಹ ಹೇಳಿಕೆ ನೀಡುವ ಮೂಲಕ ಬಿ.ಜೆ.ಪಿ. ಸಂಸ್ಕೃತಿ ಏನೆಂಬುದನ್ನು ದಯಾಶಂಕರ್ ಸಿಂಗ್ ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...