alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ಚುನಾವಣೆಗೆ ಒಂದಾದ ದಿಗ್ಗಜರು

ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ಒಂದಾಗಿದೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಧ್ಯಪ್ರದೇಶದಲ್ಲಿ ಬಿಎಸ್ಪಿಗೆ ಕಾಂಗ್ರೆಸ್ 30 ಕ್ಷೇತ್ರಗಳನ್ನು ಬಿಟ್ಟುಕೊಡಲಿದೆಯಂತೆ. ರಾಜಸ್ತಾನ ಹಾಗೂ ಛತ್ತೀಸ್ಗಢದಲ್ಲಿ ಎಷ್ಟು ಸೀಟುಗಳ ಹಂಚಿಕೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ, ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಹೊರ ಬಿದ್ದಿಲ್ಲ.

ಉತ್ತರ ಪ್ರದೇಶದಲ್ಲಿ ನಡೆದ ಎರಡು ವಿಧಾನಸಭೆ ಗೆಲುವಿನ ನಂತ್ರ ರಾಜಕೀಯ ನಾಯಕರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಯಾವತಿಗೆ ಒಂದೂ ಸ್ಥಾನ ಸಿಕ್ಕಿರಲಿಲ್ಲ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೂಡ ಕೇವಲ 19 ಸೀಟುಗಳಲ್ಲಿ ಬಿಎಸ್ಪಿ ಗೆಲುವು ಸಾಧಿಸಿತ್ತು.

ಎಸ್ಪಿ ಪರಿಸ್ಥಿತಿ ಕೂಡ ಕೆಟ್ಟದಾಗಿಯೇ ಇತ್ತು. ಸೋತು ಸುಣ್ಣವಾದ ಎರಡು ದೊಡ್ಡ ಪಕ್ಷಗಳು ಒಂದಾಗಿ ಉಪಚುನಾವಣೆ ಎದುರಿಸಿವೆ. ಮೈತ್ರಿಯಲ್ಲಿ ಎರಡೂ ಪಕ್ಷಗಳಿಗೆ ಯಶ ಸಿಕ್ಕಿದೆ. ಬಿಎಸ್ಪಿ, ಎಸ್ಪಿ ಜೊತೆ ಆರ್ ಎಲ್ ಡಿ ಹಾಗೂ ಕಾಂಗ್ರೆಸ್ ಒಂದಾಗುವ ಮನಸ್ಸು ಮಾಡ್ತಿದೆ. ಉತ್ತರ ಪ್ರದೇಶದಲ್ಲಿ ನಾಲ್ಕೂ ಪಕ್ಷಗಳು ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲಿವ್ಯಾ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡ್ತಿದೆ. ನಾಲ್ಕೂ ಪಕ್ಷ ಒಂದಾಗಿ ಕಣಕ್ಕಿಳಿದ್ರೆ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...