alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದವೆಬ್ಬಿಸಿದ ಮಾಯಾವತಿ ಪೋಸ್ಟರ್

_d86174ba-0b58-11e6-96c0-67356a4ec227_1461646372

ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಅವರ ಕಾಳಿ ಅವತಾರದ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೌದು. ಹಾತ್ರಸ್ ಪಟ್ಟಣದ ಬೀದಿಗಳಲ್ಲಿ ಕಂಡುಬಂದಿರುವ ಈ ವಿವಾದಾತ್ಮಕ ಪೋಸ್ಟರ್​ ನಲ್ಲಿ ಮಾಯಾವತಿ ಕಾಳಿ ಅವತಾರದಲ್ಲಿದ್ದು, ಒಂದು ಕೈನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ರುಂಡ ಹಿಡಿದಿದ್ದರೆ, ಆರ್​ ಎಸ್ ​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾಯಾವತಿ ಕಾಲ ಕೆಳಗಿರುವಂತೆ ಚಿತ್ರಿಸಲಾಗಿದೆ. ಅಲ್ಲದೇ ಕ್ಷಮಾದಾನ ನೀಡುವಂತೆ ಮತ್ತು ಉದ್ಯೋಗದಲ್ಲಿ ದಲಿತರಿಗೆ ಮೀಸಲಾತಿಯ ಕುರಿತಾಗಿ ಬೇಡಿಕೊಳ್ಳುತ್ತಿರುವಂತೆ ಚಿತ್ರಿಸಲಾಗಿದ್ದು, ವಿವಾದ ಸೃಷ್ಟಿಸಿದೆ.

ಅಷ್ಟೇ ಅಲ್ಲ, ಈ ಪೋಸ್ಟರ್ ಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಾಗಬಹುದಾದ ಅನಾಹುತವನ್ನು ಮನಗಂಡು ಪೊಲೀಸರು ಪೋಸ್ಟರ್ ​ಗಳನ್ನು ತೆರವುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...