alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ‘ಶ್ರೀ’ ಎಂದು ಸಂಬೋಧಿಸದ ಯೋಧನ ಸಂಬಳಕ್ಕೆ ಕತ್ತರಿ

ಪ್ರಧಾನಿ ಮೋದಿ ಅವರನ್ನು ಸಂಭೋಧಿಸುವಾಗ ಗೌರವಾನ್ವಿತ ಹಾಗೂ ಶ್ರೀ ಎಂಬ ಪದವನ್ನು ಬಳಸಿಲ್ಲ  ಎಂಬ ಕಾರಣಕ್ಕೆ ಬಿಎಸ್ಎಫ್ ಯೋಧನ 7 ದಿನಗಳ ಸಂಬಳಕ್ಕೆ ಕತ್ತರಿ ಹಾಕಲಾಗಿದೆ. ಪ್ರಧಾನಿಗೆ ಅಗೌರವ ತೋರಿದ್ದಾರೆಂದು ವೇತನವನ್ನೇ ಕಡಿತ ಮಾಡಲಾಗಿದೆ.

ಪಶ್ಚಿಮ ಬಂಗಾಳದ ಮಹತ್ಪುರದಲ್ಲಿರೋ 15ನೇ ಬೆಟಾಲಿಯನ್ ಮುಖ್ಯಕಚೇರಿಯಲ್ಲಿ ಫೆಬ್ರವರಿ 21ರಂದು ಈ ಘಟನೆ ನಡೆದಿದೆ. ಯೋಧರ ದಿನನಿತ್ಯದ ವ್ಯಾಯಾಮದ ಅಂಗವಾಗಿ ಝೀರೋ ಪರೇಡ್ ನಡೆಸಲಾಗುತ್ತಿತ್ತು. ಯೋಧ ಸಂಜೀವ್ ಕುಮಾರ್ ಪರೇಡ್ ರಿಪೋರ್ಟ್ ನೀಡಿದ್ರು.

ಈ ವೇಳೆ ಮೋದಿ ಪ್ರೋಗ್ರಾಂ ಎಂದು ಸಂಬೋಧಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅಥವಾ ಗೌರವಾನ್ವಿತ ನರೇಂದ್ರ ಮೋದಿ ಎಂಬ ಪದ ಬಳಸಿಲ್ಲ. ಇದಕ್ಕಾಗಿ ಕಮಾಂಡೆಂಟ್ ಅನೂಪ್ ಲಾಲ್ ಭಗತ್, ಯೋಧನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಸಂಬಳವನ್ನೇ ಕಡಿತ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...