alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎಫ್ ಟಾಪರ್ ಗೆ ಉಗ್ರರಿಂದ ಜೀವ ಬೆದರಿಕೆ

bsf61

ಗಡಿ ಭದ್ರತಾ ಪಡೆಯ ನೇಮಕಕ್ಕಾಗಿ ನಡೆದ ಪರೀಕ್ಷೆಯಲ್ಲಿ ಟಾಪರ್ ಆಗಿರೋ ಕಾಶ್ಮೀರದ ಯುವಕನಿಗೆ ಭಯೋತ್ಪಾದಕರು ಜೀವ ಬೆದರಿಕೆ ಹಾಕಿದ್ದಾರೆ. ನಬೀಲ್ ಅಹ್ಮದ್ ವಾಹಿ ಎಂಬಾತ ಬಿಎಸ್ಎಫ್ ನೇಮಕಾತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಮೊದಲಿಗನಾಗಿದ್ದ. ನಬೀಲ್ ಮತ್ತಾತನ ಸಹೋದರಿಗೆ ಉಗ್ರರು ಬೆದರಿಕೆ ಹಾಕಿದ್ದಾರೆ.

ಇದರಿಂದ ಆತಂಕಗೊಂಡಿರೋ ನಬೀಲ್ ಕೇಂದ್ರ ಸರ್ಕಾರದ ಸಹಾಯ ಕೇಳಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಕಳೆದ ವಾರವಷ್ಟೆ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಯುವ ಸೇನಾಧಿಕಾರಿಯನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಶೋಪಿಯಾನ್ ಜಿಲ್ಲೆಯ 22 ವರ್ಷದ ಸೇನಾಧಿಕಾರಿ ಫಯಾಜ್ ಮೃತದೇಹದ ಮೇಲೆ ಹಿಂಸೆ ನೀಡಿದ ಯಾವುದೇ ಗುರುತುಗಳಿರಲಿಲ್ಲ. ಫಯಾಜ್ ಮೃತದೇಹದ ಪಕ್ಕದಲ್ಲೇ ಖಾಲಿ ಬಂದೂಕನ್ನು ಉಗ್ರರು ಎಸೆದು ಹೋಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...