alex Certify
ಕನ್ನಡ ದುನಿಯಾ       Mobile App
       

Kannada Duniya

ಪಾದಚಾರಿಗಳು ಈ ಸೇತುವೆ ದಾಟಿದ್ರೆ ಬಂಧನ ಗ್ಯಾರಂಟಿ

dholpur

ಸುದ್ದಿ ಕೇಳಿದ್ರೆ ನಿಮಗೂ ಆಶ್ಚರ್ಯವಾಗಬಹುದು. ಆದ್ರೆ ನಾವು ಹೇಳೋದು ಶೇಕಡಾ 100ರಷ್ಟು ಸತ್ಯ. ಭಾರತದ ಆ ಸೇತುವೆ ಮೇಲೆ ಪಾದಚಾರಿಗಳು ಓಡಾಡುವಂತಿಲ್ಲ. ಹಾಗೇನಾದ್ರೂ ಓಡಾಡಿದ್ರೆ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಾರೆ.

ಧೋಲ್ಪುರ್ ನ ಚಂಬಲ್ ನದಿ ಸೇತುವೆ ಬಳಿ ಸದಾ ಪೊಲೀಸರು ಕಾವಲಿರುತ್ತಾರೆ. ಯಾವುದೇ ವ್ಯಕ್ತಿ ಅಲ್ಲಿ ನಡೆದುಕೊಂಡು ಹೋಗಲು ಮುಂದಾದ್ರೆ ಆತನನ್ನು ತಡೆಯುತ್ತಾರೆ. ಒಂದು ವೇಳೆ ವ್ಯಕ್ತಿ ಹಟ ಹಿಡಿದ್ರೆ ಲಾರಿ ಅಥವಾ ಯಾವುದಾದ್ರೂ ವಾಹನದ ಮೇಲೆ ವ್ಯಕ್ತಿಯನ್ನು ಕಳುಹಿಸಿ ಸೇತುವೆಯ ಇನ್ನೊಂದು ಜಾಗಕ್ಕೆ ತಲುಪಿಸುತ್ತಾರೆ.

ಚಂಬಲ್ ನದಿ ಆಳವಾಗಿದ್ದು ಅನೇಕ ಮೊಸಳೆಗಳಿವೆ. ವ್ಯಕ್ತಿ ಅಪ್ಪಿತಪ್ಪಿ ಸೇತುವೆ ಕೆಳಗೆ ಬಿದ್ದರೂ ಮೂಳೆ ಕೂಡ ಸಿಗುವುದು ಕಷ್ಟ. ಸಾಕಷ್ಟು ಮಂದಿ ಈ ಸೇತುವೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಶವ ಮಾತ್ರ ಸಿಕ್ಕಿಲ್ಲ. ಆತ್ಮಹತ್ಯೆ ಮಾಡಿಕೊಂಡ ನಂತ್ರ ಶವ ಹುಡುಕಾಟ ಪೊಲೀಸರಿಗೆ ಒಂದು ತಲೆನೋವಿನ ಕೆಲಸ. ಹಾಗಾಗಿ ಪಾದಚಾರಿಗಳ ಸಂಚಾರವನ್ನು ಅಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...