alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾದ್ರೂ ನಿಜ! ಫೇಸ್ ಬುಕ್ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ

ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಕಾರಣಕ್ಕೆ ನಿಗದಿಯಾಗಿದ್ದ ಮದುವೆಯೊಂದು ಮುರಿದು ಬಿದ್ದಿದೆ. ಮದುವೆಯನ್ನು ರದ್ದು ಮಾಡಿರುವ ವರ, ಮತ್ತಾತನ ಕುಟುಂಬ ಅದಕ್ಕೆ ನೀಡಿರುವ ಕಾರಣ ಮಾತ್ರ ಅಚ್ಚರಿ ತರಿಸುವಂತಿದೆ.

ಮದುವೆಗೆ ಇನ್ನು ಎರಡು ದಿನವಿರುವಾಗ ಫೇಸ್ ಬುಕ್ ನಲ್ಲಿ ವಧುವಿನ ಚಿತ್ರವೊಂದು ವರನ ಕುಟುಂಬದವರ ಕಣ್ಣಿಗೆ ಬಿದ್ದಿದೆ. ಆ ಫೋಟೋದಲ್ಲಿ ವಧು ಹಣೆಗೆ ಸಿಂಧೂರವಿಟ್ಟುಕೊಂಡಿದ್ದು, ಮದುವೆಯಾದವರು ಮಾತ್ರ ಸಿಂಧೂರವಿಡುವ ಕಾರಣ ಆಕೆಗೆ ಈಗಾಗಲೇ ಮದುವೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ ವರನ ಕುಟುಂಬ.

ಇದೇ ಕಾರಣ ಹೇಳಿ ಮದುವೆಯನ್ನು ರದ್ದು ಮಾಡಿದ್ದು, ಇದರಿಂದ ಮದುವೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದ ವಧುವಿನ ಕುಟುಂಬ ಕಂಗಾಲಾಗಿದೆ. ನಿಗದಿಯಾಗಿದ್ದ ಮದುವೆಯನ್ನು ಹಾಳು ಮಾಡಲೆಂದೇ ಯಾರೋ ಫೋಟೋಶಾಪ್ ಮಾಡಿರುವ ಈ ಫೋಟೋವನ್ನು ಹಾಕಿದ್ದಾರೆಂದು ಹೇಳುತ್ತಿದ್ದರೂ ವರನ ಕುಟುಂಬದವರು ಮಾತ್ರ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆನ್ನಲಾಗಿದೆ. ಇದೀಗ ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಏನಾಗುತ್ತದೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...