alex Certify ನಟ ವಿಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ವಿಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದ ವಧು….!

ನವ ವಧುವೊಬ್ಬಳು ತನ್ನ ಮದುವೆ ದಿನ ನಟ ವಿಕ್ಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದು ಕುಳಿತ ನಾಟಕೀಯ ಘಟನೆ ಮುಂಬೈನಲ್ಲಿ ನಡೆದಿದೆ.

ಫ್ಯಾಶನ್ ಸ್ಟೈಲಿಸ್ಟ್ ಪ್ರೇರಣಾ ನೇಗಿ ಎಂಬವರು ವಿಕ್ಕಿ ಕೌಶಲ್ ಕಟ್ಟಾ ಅಭಿಮಾನಿಯಾಗಿದ್ದು ಅವರ ಮದುವೆ ಮುಂಬೈನ ಹೋಟೆಲ್ ಒಂದರಲ್ಲಿ ಏರ್ಪಾಟಾಗಿತ್ತು. ಅದೇ ದಿನ ವಿಕ್ಕಿ ಕೌಶಲ್ ಅದೇ ಹೋಟೆಲ್ನಲ್ಲಿ ತಂಗಿದ್ದರು. ಈ ವಿಚಾರ ಅದೇಗೋ ಪ್ರೇರಣಾಗೆ ಗೊತ್ತಾಗಿದೆ.

ತನ್ನ ಗೆಳತಿಯರ ದಂಡಿನೊಂದಿಗೆ ವಿಕಿ ಕೌಶಲ್ ರೂಮ್ ಬಳಿ ಹೋದ ಪ್ರೇರಣಾ ಫೋಟೋ ತೆಗೆಸಿಕೊಳ್ಳುವ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವಿಕ್ಕಿ ಕೌಶಲ್ ಸಿಬ್ಬಂದಿ ನಿರಾಕರಿಸಿದಾಗ ಪ್ರೇರಣಾ, ನನ್ನೊಂದಿಗೆ ಅವರು ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದಿದ್ದಾಳೆ.

ಅಲ್ಲದೆ ನಾನು ಮದುವೆಯಾಗದಿದ್ದರೆ ನಿಮಗೆ ಸರಿ ಕಾಣುತ್ತದೆ ಎಂದು ಸಿಬ್ಬಂದಿಯನ್ನು ಪ್ರೇರಣಾ ಪ್ರಶ್ನಿಸಿದ್ದು, ಆಕೆಯ ಗೆಳತಿಯರು ಪ್ಲೀಸ್ ಪ್ಲೀಸ್ ಎಂದು ಗೋಗರೆದಿದ್ದಾರೆ. ಕಡೆಗೂ ಪ್ರೇರಣಾಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಆದರೆ ನಿಗದಿತ ಸಮಯಕ್ಕೆ ಆಕೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...