alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ ಮ್ಯಾರೇಜ್ ನಂತ್ರ ಕಾರಿನಿಂದ ಜಿಗಿದು ಓಡಿ ಹೋದ ವಧು ಮಾಡಿದ್ದೇನು?

ಪ್ರೇಮ ವಿವಾಹವಾಗಿ ಕೆಲವೇ ಗಂಟೆಗಳಲ್ಲಿ ವರನ ವಿರುದ್ಧ ವಧು ಅತ್ಯಾಚಾರದ ದೂರು ದಾಖಲಿಸಿದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ. ಯಾವ ಯಾವ ಕೇಸ್ ದಾಖಲೆ ಮಾಡಬೇಕೆಂದು ಪೊಲೀಸರು ಕೆಲಕಾಲ ಆಲೋಚನೆ ನಡೆಸಿದ್ದಾರೆನ್ನಲಾಗಿದೆ. ಘಟನೆ ಬಿಹಾರದ ರಾಜಧಾನಿ ಪಾಟ್ನಾದ ಕದಮಕುವಾದಲ್ಲಿ ನಡೆದಿದೆ.

ಇಬ್ಬರೂ ಬಾಲ್ಯ ಸ್ನೇಹಿತರು ಎನ್ನಲಾಗಿದೆ. 2012ರಿಂದ ಇಬ್ಬರೂ ಲಿವ್ ಇನ್ ನಲ್ಲಿದ್ದರಂತೆ. ಫೆಬ್ರವರಿ 9ರಂದು ಮದುವೆ ಮಾಡಿಕೊಂಡಿದ್ದಾರೆ. ಮದುವೆ ಮರುದಿನ ಅದೇನಾಯ್ತೋ ಗೊತ್ತಿಲ್ಲ ವಧು, ವರ ಹಾಗೂ ಆತನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆಗೆ ಯತ್ನ ಸೇರಿದಂತೆ ವರನ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾಳೆ.

ಮದುವೆ ಮರುದಿನ ಗಂಡನ ಮನೆಗೆ ಹೋಗ್ತಿದ್ದ ವಧು ಕಾರಿನಿಂದ ಜಿಗಿದು ತಪ್ಪಿಸಿಕೊಂಡಿದ್ದಾಳೆ. ನಂತ್ರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಕಾರಿನಲ್ಲಿ ವರ-ವಧುವಿನ ನಡುವೆ ಜಗಳ ನಡೆದಿದೆಯಂತೆ. ವರ, ವಧುವಿನ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನಂತೆ. ವರದಕ್ಷಿಣೆಯಾಗಿ 2 ಲಕ್ಷ ರೂಪಾಯಿ ಕಾರಿನ ಬೇಡಿಕೆಯಿಟ್ಟಿದ್ದರಂತೆ ವರನ ಕಡೆಯವರು. ಆದ್ರೆ ವಧು ಕುಟುಂಬಸ್ಥರು ನೀಡದ ಕಾರಣ ಈ ಗಲಾಟೆ ಎನ್ನಲಾಗ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...