alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮೊದಲ ರಾತ್ರಿ ಚಿಕನ್ ತಿನ್ನಿಸಿ ಇಂಥ ಕೆಲಸ ಮಾಡಿದ್ಲು ವಧು…!

ಉತ್ತರ ಪ್ರದೇಶದ ಬಿಜನೌರ್ ನಲ್ಲಿ ಮನೆಯವರಿಗೆ ನಿದ್ರೆ ಔಷಧಿ ನೀಡಿ ಆಭರಣ ಹಾಗೂ ನಗದನ್ನು ವಧು ಕದ್ದೊಯ್ದ ಘಟನೆ ನಡೆದಿದೆ. ಮೊದಲ ರಾತ್ರಿ ವಧು ಈ ಕೆಲಸ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಫೆಬ್ರವರಿ 16ರಂದು ದೇವೇಂದ್ರನ ಮದುವೆ ಪುಷ್ಪ ಎಂಬಾಕೆ ಜೊತೆ ನಡೆದಿತ್ತು. ವಧುವಿನ ಕುಟುಂಬಕ್ಕೆ 80 ಸಾವಿರ ರೂಪಾಯಿ ನೀಡಿದ್ದರು ದೇವೇಂದ್ರನ ಮನೆಯವರು. ದೇವಸ್ಥಾನವೊಂದರಲ್ಲಿ ಮದುವೆ ನಡೆದಿತ್ತು. ಮೊದಲ ರಾತ್ರಿಯೇ ಪುಷ್ಪಾ ಮಾಂಸ ಸೇವಿಸುವ ಇಚ್ಛೆ ವ್ಯಕ್ತಪಡಿಸಿದ್ದಾಳೆ.

ದೇವೇಂದ್ರ ಮಾರುಕಟ್ಟೆಯಿಂದ ಕೋಳಿ ತಂದಿದ್ದಾನಂತೆ. ಚಿಕನ್ ತಯಾರಿಸಿ ಪುಷ್ಪಾ ಮನೆಯವರಿಗೆಲ್ಲ ತಿನ್ನಿಸಿದ್ದಾಳೆ. ಬೆಳಿಗ್ಗೆ ನಿದ್ರೆಯಿಂದ ಎಚ್ಚರಗೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಪುಷ್ಪಾ ಐದು ಸಾವಿರ ರೂಪಾಯಿ ನಗದು ಹಾಗೂ ಆಭರಣ ತೆಗೆದುಕೊಂಡು ಓಡಿ ಹೋಗಿದ್ದಳು. ಮಧ್ಯವರ್ತಿ ನೆರವಿನಿಂದ ಈ ಮದುವೆ ನಡೆದಿತ್ತು. ಪುಷ್ಪಾ ಹಾಗೂ ಮಧ್ಯವರ್ತಿ ಇಬ್ಬರೂ ಮೋಸ ಮಾಡಿದ್ದಾರೆಂದು ದೇವೇಂದ್ರ ಆರೋಪ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...