alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಾಗಿ ಉಕ್ಕಿ ಹರಿಯುತ್ತಿದ್ದ ನದಿ ದಾಟಿ ಬಂದ್ಲು ವಧು

ಗುಡ್ಡದ ತಪ್ಪಲಿನಲ್ಲಿದ್ದ ವಧು, ತನ್ನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಲು ಉಕ್ಕಿ ಹರಿಯುತ್ತಿದ್ದ ಮೋಯರ್‌ ನದಿಯನ್ನು ದಾಟಿ ಮಂಟಪಕ್ಕೆ ಬಂದಿದ್ದಾಳೆ. 24 ವರ್ಷದ ವಧು ರಾಸ್ತಿ, ಸತ್ಯಮಂಗಲಂ ಹುಲಿ ರಕ್ಷಿತಾರಣ್ಯದ ಪಕ್ಕ ಉಕ್ಕಿ ಹರಿಯುತ್ತಿದ್ದ ನದಿಯನ್ನು ತೆಪ್ಪದಲ್ಲಿ ದಾಟಿ ಮದುವೆ ಮಂಟಪಕ್ಕೆ ಬಂದಿದ್ದಾಳೆ.

ಪ್ರವಾಹದ ಕಾರಣ, ಅರಣ್ಯ ಇಲಾಖೆ ಈ ಭಾಗದಲ್ಲಿ ತೆಪ್ಪದಲ್ಲಿ ಸಾಗುವುದನ್ನು ನಿಷೇಧಿಸಿತ್ತು. ಮದುವೆ ಕಾರ್ಯಕ್ರಮದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಕುಟುಂಬ ಸದಸ್ಯರು ಹಾಗೂ ರಾಸ್ತಿ, 2 ತೆಪ್ಪದಲ್ಲಿ ನದಿ ದಾಟಿ, ಮದುವೆ ಮಂಟಪಕ್ಕೆ ತಲುಪಿದ್ದಾರೆ. ನದಿಗೆ ಸೇತುವೆ ಇಲ್ಲದ ಕಾರಣ, ವಧುವಿನ ಕುಟುಂಬ ನದಿ ದಾಟುವುದು ಅನಿವಾರ್ಯವಾಗಿತ್ತು. ಇದು ಅತ್ಯಂತ ಅಪಾಯದ ಸನ್ನಿವೇಶವಾಗಿದ್ದು, ಸರಕಾರ ಶೀಘ್ರದಲ್ಲೇ ನದಿಗೆ ಸೇತುವೆ ಕಟ್ಟಬೇಕು ಎಂದು ವಧುವಿನ ಕುಟುಂಬ ಸರಕಾರವನ್ನು ಆಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...