alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ

ಬಿಹಾರದ ಭಬುವಾದಲ್ಲಿ ನವ ವಿವಾಹಿತೆಯೊಬ್ಬಳು ಮೊದಲ ರಾತ್ರಿಯಂದೇ ಮಾಡಿರುವ ಕೆಲಸಕ್ಕೆ ವರನ ಕುಟುಂಬ ಕಂಗಾಲಾಗಿ ಹೋಗಿದೆ. ವರನಿಗೆ ಕೈಕೊಟ್ಟು ಹಣ ಹಾಗೂ ಆಭರಣದೊಂದಿಗೆ ಪರಾರಿಯಾಗಿರುವ ವಧುವಿನ ವಿರುದ್ಧ ಈಗ ಪೊಲೀಸರಿಗೆ ದೂರು ನೀಡಲಾಗಿದೆ.

ಪಂಕಜ್ ಕುಮಾರ್ ಎಂಬಾತನ ವಿವಾಹ ಸಂಗೀತ ಕುಮಾರಿಯೊಂದಿಗೆ ನೆರವೇರಿದ್ದು, ಇವರಿಬ್ಬರ ಮೊದಲ ರಾತ್ರಿಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು.

ಈ ವೇಳೆ ಮುಟ್ಟಿನ ನೆವ ಹೇಳಿದ ಸಂಗೀತ ಕುಮಾರಿ, ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾಳೆ. ಬೆಳಿಗ್ಗೆ ಸಂಗೀತ ಕುಮಾರಿ ಕೋಣೆಯಲ್ಲಿ ಕಾಣದಿದ್ದಾಗ ವರನ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ನೋಡಲಾಗಿ ಹಣ ಹಾಗೂ ಆಭರಣ ಕಾಣೆಯಾಗಿರುವುದು ಕಂಡು ಬಂದಿದೆ.

ಇದರಿಂದ ಕಂಗಾಲಾದ ವರನ ಕುಟುಂಬ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅತ್ತ ಕೈ ಹಿಡಿದ ಪತ್ನಿಯೂ ಇಲ್ಲದೆ ಇತ್ತ ಹಣವನ್ನೂ ಕಳೆದುಕೊಂಡಿರುವ ಪಂಕಜ್ ಕುಮಾರ್, ತಮ್ಮ ಮಗಳ ವಿಚಾರ ಗೊತ್ತಿದ್ದರೂ ಆಕೆಯ ಪೋಷಕರು ತನ್ನೊಂದಿಗೆ ವಿವಾಹ ನಡೆಸುವ ಮೂಲಕ ವಂಚಿಸಿದ್ದಾರೆಂದು ಅಲವತ್ತುಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...