alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನ ಆಸ್ಪತ್ರೆ ಸೇರಿದ್ಲು ವಧು….

ಸಿನಿಮಾ, ಧಾರಾವಾಹಿ ಮದುವೆಗಳಲ್ಲಿ ಸಾಕಷ್ಟು ಟ್ವಿಸ್ಟ್ ಇರುತ್ತೆ. ನಿಜ ಜೀವನದಲ್ಲಿ ಇಂಥ ಟ್ವಿಸ್ಟ್ ಮದುವೆಗಳು ಅಪರೂಪ. ಆದ್ರೆ ಪಶ್ಚಿಮ ಬಂಗಾಳದ ಬೆನಿಯಾಪುರ್ ನಲ್ಲಿ ಎರಡು ದಿನಗಳ ಹಿಂದೆ ಟ್ವಿಸ್ಟ್ ಮದುವೆ ನಡೆಯಿತು. ಮದುವೆಗೆ ಮುನ್ನ ಅನಾರೋಗ್ಯಕ್ಕೊಳಗಾದ ವಧುವನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಮದುವೆ ಮುಂದೂಡಲು ಸಾಧ್ಯವಾಗದ ಕಾರಣ ವರ ಆಸ್ಪತ್ರೆಗೆ ಬಂದು ಮದುವೆಯಾದ.

ಮೊಹಮ್ಮದ್ ಶಾನವಾಜ್ ಆಲಂ ಸೌದಿಯಲ್ಲಿ ಇಂಜಿನಿಯರ್ ಕೆಲಸ ಮಾಡ್ತಿದ್ದಾನೆ. ಆತನ ಮದುವೆ ಕೊಲ್ಕತ್ತಾದಲ್ಲಿ ಕೆಲಸ ಮಾಡುವ ಹೈರಾ ಜೊತೆ ನಿಶ್ಚಿತವಾಗಿತ್ತು. ಮದುವೆ ಹಿಂದಿನ ದಿನ ಹೈರಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಾಂತಿ ಶುರುವಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

ಹೈರಾ ಆರೋಗ್ಯ ಸುಧಾರಿಸದ ಕಾರಣ ಆಸ್ಪತ್ರೆಯಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳದಿ ಶಾಸ್ತ್ರ ಮುಗಿದಿದ್ದರಿಂದ ಮದುವೆ ಮುಂದೂಡುವ ಹಾಗಿರಲಿಲ್ಲ. ಧರ್ಮಕ್ಕೆ ವಿರುದ್ಧವಾಗಿ ಹೋಗಲು ಇಷ್ಟಪಡದ ಆಲಂ ಆಸ್ಪತ್ರೆಗೆ ದಿಬ್ಬಣದೊಂದಿಗೆ ಬಂದಿದ್ದಾನೆ. 15 ಮಂದಿ ಕುಟುಂಬಸ್ಥರ ಮುಂದೆ ಹೈರಾ ಮದುವೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...