alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗಾರಗೊಂಡು ಕುಳಿತಿದ್ದಳು ವಧು ಆದ್ರೆ ವರ..

marriage

ಪಂಜಾಬ್ ನ ಬಾದ್ಸನ್ ಗ್ರಾಮದಲ್ಲಿ ಮದುವೆಯೊಂದು ನಿಶ್ಚಯವಾಗಿದ್ದು. ಸಿಂಗಾರಗೊಂಡ ವಧು ವರನಿಗಾಗಿ ಕಾಯುತ್ತ ಕುಳಿತಿದ್ದಳು. ಮದುವೆ ಮುಹೂರ್ತ ಸರಿದರೂ ದಿಬ್ಬಣ ಮಾತ್ರ ಬರಲಿಲ್ಲ.

21 ವರ್ಷದ ಶಾಲು ಹಾಗೂ ಅದೇ ಊರಿನ ಗುರುಪ್ರೀತ್ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಪ್ರೀತ್ ಶಾಲು ಮನೆಗೆ ಬಂದು ಹೋಗಿ ಮಾಡುತ್ತಿದ್ದ. ತಡರಾತ್ರಿಯವರೆಗೂ ಶಾಲು ಮನೆಯಲ್ಲಿರುತ್ತಿದ್ದ. ಹಾಗಾಗಿ ಇಬ್ಬರಿಗೂ ಮದುವೆ ಮಾಡಲು ಶಾಲು ಮನೆಯವರು ಮುಂದಾಗಿದ್ದಾರೆ. ಇದಕ್ಕೆ ಗುರುಪ್ರೀತ್ ಮನೆಯವರ ಒಪ್ಪಿಗೆಯಿರಲಿಲ್ಲವಂತೆ.

ಪಂಚಾಯತಿ ಸದಸ್ಯರ ಹೇಳಿಕೆ ಮೇರೆಗೆ ಮದುವೆಗೆ ಒಪ್ಪಿಕೊಂಡಿದ್ದಾರೆ. ಸೋಮವಾರ ಮದುವೆ ಮುಹೂರ್ತವಿಡಲಾಗಿದೆ.  ಹುಡುಗಿ ಕಡೆಯವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದ್ರೆ ಮುಹೂರ್ತದ ಸಮಯ ಸರಿದರೂ ದಿಬ್ಬಣ ಮಾತ್ರ ಬರಲಿಲ್ಲ. ಇದರಿಂದ ಆತಂಕಗೊಂಡ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳಲಿಲ್ಲ. ಇದರಿಂದ ನೊಂದ ವಧುವಿನ ಕಡೆಯವರು ಧರಣಿಗೆ ಮುಂದಾಗಿದ್ದಾರೆ. ಪೊಲೀಸ್ ಠಾಣೆ ಎದುರು ಪ್ರತಿಭಟನೆ ನೆಡಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಹುಡುಗಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...