alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದೂಕು ಹಿಡಿದು ವರನ ಮನೆಗೆ ಬಂದ್ಲು ವಧು

dulhan

ಮದುವೆ ನಂತ್ರ ವಧು ನಾಚಿಕೊಂಡು ಗಂಡನ ಮನೆಗೆ ಪ್ರವೇಶ ಮಾಡ್ತಾಳೆ. ಆದ್ರೆ ಇಲ್ಲೊಬ್ಬ ವಧು ಕೈನಲ್ಲಿ ತಲ್ವಾರ್ ಹಾಗೂ ಬಂದೂಕು ಹಿಡಿದು ಅದ್ಧೂರಿ ಮೆರವಣಿಗೆ ಮೂಲಕ ವರನ ಮನೆಗೆ ಬಂದಿದ್ದಾಳೆ.

ದೆಹಲಿ ಸುಭಾಷ್ ನಗರದ ನಿವಾಸಿ ಭೂಪೇಶ್ ಶರ್ಮಾ ಮಗಳು ಮನೀಶಾ ಮದುವೆ ಇದೇ ಕಾಲೋನಿಯ ನಿವಾಸಿ ರಾಹುಲ್ ಜೊತೆ ನಿಶ್ಚಯವಾಗಿತ್ತು. ವಧು-ವರ ಹಾಗೂ ಅವರ ಕುಟುಂಬ ಶಿಕ್ಷಿತ ಕುಟುಂಬ. ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿರುವ ಕುಟುಂಬ. ಮನೀಶಾ ಫ್ಯಾಶನ್ ಡಿಸೈನರ್ ಆದ್ರೆ ರಾಹುಲ್ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ.

ರಾಜಸ್ತಾನ ಮೂಲದ ಮನೀಶಾ ಅಲ್ಲಿನ ಮದುವೆ ಸಂಪ್ರದಾಯವನ್ನು ಚಿಕ್ಕವಳಿರುವಾಗ ನೋಡಿದ್ದಳು. ಮದುವೆ ವೇಳೆ ತಾನೂ ಕುದುರೆ ಮೇಲೆ ಕುಳಿತುಕೊಳ್ಳಬೇಕೆಂದು ತಂದೆಗೆ ತಿಳಿಸಿದ್ದಾಳೆ. ಇದನ್ನು ವರನ ಮನೆಯವರಿಗೆ ಹೇಳಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ. ನಂತ್ರ ತನ್ನಿಚ್ಛೆಯಂತೆ ಮನೀಶಾ ಕುದುರೆ ಮೇಲೆ ಕುಳಿತು ಕೈನಲ್ಲಿ ತಲ್ವಾರ್ ಹಾಗೂ ಬಂದೂಕು ಹಿಡಿದು ಬಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...