alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನ ಅತ್ತೆ-ಮಾವನ ಮುಂದೆ ವಧು ಇಟ್ಲು ಈ ಷರತ್ತು…!

ಮೋದಿಯವರ ಸ್ವಚ್ಛ ಭಾರತ್ ಕಾರ್ಯಕ್ರಮ ಜಾರಿಯಾದಾಗಿನಿಂದ ಶೌಚಾಲಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡ್ತಿದೆ. ಅಂತೆಯೇ, ಮದುವೆಯಾಗಿ ಗಂಡನ ಮನೆಗೆ ಹೋಗೋ ಹೆಣ್ಣುಮಕ್ಕಳು ಕೂಡಾ ಮೊದಲು ಕೇಳೋದು ನಿಮ್ಮ ಮನೆಯಲ್ಲಿ ಟಾಯ್ಲೆಟ್ ಇದೀಯಾ ಅಂತಾ…!

ಆದ್ರೆ ಮಧ್ಯ ಪ್ರದೇಶದ ಈ ಯುವತಿ ಸ್ವಲ್ಪ ಭಿನ್ನ. ತಾನು ಮದುವೆ ಆಗೋ ಹುಡುಗನ ತಂದೆ- ತಾಯಿಗೆ ಒಂದು ಷರತ್ತು ಹಾಕಿದ್ದಾಳೆ. ಇದನ್ನು ಕೇಳಿದ ಸಂಬಂಧಿಕರು ದಂಗಾಗಿ ಹೋಗಿದ್ದಾರೆ. ಪ್ರಿಯಾಂಕ ಭಡೋರಿ ಎಂಬ ಈ ಯುವತಿ ತನ್ನ ಭಾವಿ ಅತ್ತೆ-ಮಾವನಿಗೆ, ನಿಮ್ಮ ಮನೆ ಸೊಸೆಯಾಗಬೇಕು ಅಂದ್ರೆ 10 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ತಾಕೀತು ಮಾಡಿದ್ದಾಳೆ. ಪ್ರಿಯಾಂಕ ಮಾತು ಕೇಳಿ ಅತ್ತೆ-ಮಾವನಿಗೆ ಸ್ವಲ್ಪ ವಿಚಿತ್ರವೆನಿಸಿದ್ರೂ, ಆಕೆಯ ಮಾತಿಗೆ ಒಪ್ಪಿಕೊಂಡು, ತಮ್ಮ ಮಗನ ಜೊತೆ ಮದುವೆ ಮಾಡಿದ್ರು.

ಪ್ರಿಯಾಂಕ ಮಹಾರಾಷ್ಟ್ರದ ಕಿಶಿಪುರ ಗ್ರಾಮದ ನಿವಾಸಿ. ಇಲ್ಲಿ ವಿವಾಹ ನಿಶ್ಚಯವಾದ ವಧುವಿಗೆ ಏನು ಬೇಕು ಅಂತಾ ಕೇಳುವುದು ಒಂದು ಸಂಪ್ರದಾಯ. ಸಾಮಾನ್ಯ ಹುಡುಗಿಯರಾದ್ರೆ ಆಭರಣ, ಬಟ್ಟೆ ಬರೆ ಕೇಳ್ತಾರೆ. ಆದ್ರೆ ಪ್ರಿಯಾಂಕಾ ಮಾತ್ರ ತನ್ನ ಅತ್ತೆ-ಮಾವ 10 ಸಾವಿರ ಸಸಿ ನೆಡುವಂತೆ ಕೇಳಿದ್ದಳು.

ಪ್ರಿಯಾಂಕಾಗೆ ಗಿಡಮರಗಳೆಂದ್ರೆ ತುಂಬಾ ಪ್ರೀತಿ. ಆಕೆ 10ನೇ ವಯಸ್ಸಿನಿಂದಲೆ ಗಿಡಗಳನ್ನು ನೆಡಲು ಆರಂಭಿಸಿದ್ಲು. ಇನ್ನು ಇವಳು ಮದುವೆಯಾಗಿದ್ದು ಕೂಡಾ ಅಂತರಾಷ್ಟ್ರೀಯ ಭೂದಿನದಂದು ಅನ್ನೋದು ಮತ್ತೊಂದು ವಿಶೇಷ.

ಪತ್ನಿಯ ಪರಿಸರ ಪ್ರೀತಿಗೆ ಪತಿ ರವಿ ಚೌಹಾಣ್ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. 10 ಸಾವಿರ ಸಸಿಗಳಲ್ಲಿ ಐದು ಸಾವಿರ ಗಿಡಗಳನ್ನ ಪ್ರಿಯಾಂಕಾ ತವರೂರಲ್ಲಿ ಇನ್ನುಳಿದ 5 ಸಾವಿರ ಗಿಡಗಳನ್ನು ತಮ್ಮ ಊರಲ್ಲಿ ನೆಡುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...