alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ವೇಳೆ ವರನಿಗೆ ಕಪಾಳ ಮೋಕ್ಷ ಮಾಡಿದ್ಲು ವಧು

ಮದುವೆ ಸಂದರ್ಭದಲ್ಲಿ ವರ ಕೋಪಗೊಂಡಿರೋದು, ಮದುವೆ ಮಧ್ಯೆಯೇ ಗಲಾಟೆ ಶುರುಮಾಡಿರುವ ಅನೇಕ ಘಟನೆಗಳು ಆಗಾಗ ವರದಿಯಾಗ್ತಿರುತ್ತವೆ. ಆದ್ರೆ ಅಪರೂಪ ಎನ್ನುವಂತೆ ಮದುವೆ ವೇಳೆ ವಧು, ವರನಿಗೆ ಬೈದ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆ ವಿಡಿಯೋ ವೈರಲ್ ಆಗಿದೆ. ವರ ಮಾಲೆ ನಂತ್ರ ವರನಿಗೆ ಬೈಯ್ಯುವ ವಧು, ಕಪಾಳ ಮೋಕ್ಷ ಕೂಡ ಮಾಡಿದ್ದಾಳೆ.

ಘಟನೆ ನಡೆದಿರುವುದು ಝಾನ್ಸಿಯಿಂದ 65 ಕಿಲೋಮೀಟರ್ ದೂರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ. ವರಮಾಲೆ ನಂತ್ರ ವಧುವಿಗೆ ವರನ ಪ್ರೀತಿ ವಿಷ್ಯ ಗೊತ್ತಾಗಿದೆ. ಇದ್ರಿಂದ ಕೋಪಗೊಂಡ ವಧು, ವರನಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಕಪಾಳ ಮೋಕ್ಷ ಮಾಡಿದ್ದಾಳೆ. ವರನಿಗೆ ವಧು ಬೈಯ್ಯುತ್ತಿದ್ದರೆ ನೆರೆದವರೆಲ್ಲ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು.

ಸೋಮವಾರ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮದುವೆಗೂ ಮುನ್ನ 6 ಲಕ್ಷ ರೂಪಾಯಿ ಕೇಳಿದ್ದ ವರನ ಕಡೆಯವರು ನಂತ್ರ ಮನೆ ಸಾಮಾನು, ದ್ವಿಚಕ್ರ ವಾಹನಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಮಧ್ಯೆ ವರನ ಹಳೆ ಪ್ರೀತಿ ವಿಷ್ಯ ವಧುವಿಗೆ ಗೊತ್ತಾಗಿದೆ. ವಿಷ್ಯ ತಿಳಿದ ವಧು ಬಾಯಿಗೆ ಬಂದಂತೆ ಬೈದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...