alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಶಾಸ್ತ್ರವಿಲ್ಲದೆ ವರನ ಮನೆಗೆ ಹೊರಟ್ಲು ವಧು

ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಮದುವೆ ದಿನ ವಧು-ವರರ ಸಂಬಂಧಿಕರ ಮಧ್ಯೆ ಗಲಾಟೆ ನಡೆದಿದೆ. ಮಧ್ಯರಾತ್ರಿ ಶುರುವಾದ ಗಲಾಟೆ ಮದುವೆಗೆ ಅಡ್ಡಿಯುಂಟು ಮಾಡಿದೆ. ಕುಟುಂಬಸ್ಥರ ಮಾನ ಉಳಿಸಲು ವಧು ತೆಗೆದುಕೊಂಡ ನಿರ್ಧಾರ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ವರದಕ್ಷಿಣೆ ವಿಚಾರಕ್ಕೆ ವರ ಮಾಲೆ ವೇಳೆ ಶುರುವಾದ ಗಲಾಟೆ ರಾತ್ರಿ ಜೋರಾಗಿದೆ. ವರ-ವಧು ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ವಧು ಕಡೆಯ ವ್ಯಕ್ತಿಯೊಬ್ಬನಿಗೆ ಗಂಭೀರ ಗಾಯಗಳಾಗಿವೆ. ರಾತ್ರಿ ಗಲಾಟೆ ನಡೆದಿದ್ದರಿಂದ ಮದುವೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಪಾಲಕರು. ಆದ್ರೆ ವಧು-ವರ ಏಕಾಂತದಲ್ಲಿ ಮಾತನಾಡಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

ಮದುವೆ ಮಾಡಿಕೊಳ್ಳದೆ ವಧು ವರನ ಮನೆಗೆ ಹೋಗಿದ್ದಾಳೆ. ಘಟನೆ ಭಾನುವಾರ ನಡೆದಿದ್ದು, ಮಂಗಳವಾರ ವಿಧಿ-ವಿಧಾನದ ಮೂಲಕ ಮನೆಯಲ್ಲಿಯೇ ಮದುವೆ ಮಾಡಿಕೊಳ್ಳುವುದಾಗಿ ವರ ಹೇಳಿದ್ದಾನೆ. ಗಲಾಟೆ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...