alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಚಕ್ಕೆ ಬಲಿಯಾಯ್ತು 10 ತಿಂಗಳ ಮಗು

infant-died-due-to-lack-of-medical-facility-after-hospital-staff-demanded-bribe-to-attend-him-in-uttar-pradesh

ಉತ್ತರ ಪ್ರದೇಶದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ 10 ತಿಂಗಳ ಮಗುವಿನ ಚಿಕಿತ್ಸೆ ನೀಡಲು ಲಂಚ ಕೇಳಿದ ಘಟನೆ ವರದಿಯಾಗಿದೆ.

ಮಗುವಿಗೆ ತೀವ್ರ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಮಗುವಿನ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನೂ ನೋಡದ ಆಸ್ಪತ್ರೆಯ ಸಿಬ್ಬಂದಿ, ಮಗುವಿನ ತಂದೆ- ತಾಯಿಯ ಬಳಿ ಲಂಚ ಕೇಳಿದ್ದಾರೆ. ಮಗುವಿನ ಪಾಲಕರು ಕಡು ಬಡವರಾಗಿದ್ದ ಕಾರಣ ದುಡ್ಡು ನೀಡಲು ಸಾಧ್ಯವಾಗಿಲ್ಲ. ಇದರಿಂದ ಆಸ್ಪತ್ರೆಯವರು ಮಗುವಿನ ಚಿಕಿತ್ಸೆ ನೀಡಲಿಲ್ಲವೆನ್ನಲಾಗಿದೆ.

ಆಸ್ಪತ್ರೆಯವರ ಲಂಚದಾಸೆ ಮತ್ತು ನಿಷ್ಕಾಳಜಿಯಿಂದಾಗಿ ಮಗು ಸಾವನ್ನಪ್ಪಿದೆ. ಲಂಚ ಕೇಳಿದ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...