alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಂಟದ ಸುತ್ತಳತೆ ಕೇಳಿದವನಿಗೆ ಯುವತಿಯಿಂದ ಶಾಸ್ತಿ

ಇಂಟರ್ನೆಟ್ ನಲ್ಲಿ ಪ್ರತಿಯೊಬ್ಬರಿಗೂ ಕಹಿ ಅನುಭವ ಆಗಿರುತ್ತದೆ. ಸಾಮಾನ್ಯವಾಗಿ ಸೈಬರ್ ಬುಲ್ಲಿಯಿಂಗ್ ಗೆ ಎಲ್ರೂ ತುತ್ತಾಗಿರುತ್ತಾರೆ. ಅಸಭ್ಯ ಮೆಸೇಜ್, ಫೋಟೋಗಳನ್ನು ಟ್ಯಾಗ್ ಮಾಡೋದು, ಅನಾಮಧೇಯ ಹೆಸರಲ್ಲಿ ಚಾಟ್ ಮಾಡಿ ವಂಚಿಸೋದು ಇವೆಲ್ಲವೂ ಕಾಮನ್ ಆಗಿಬಿಟ್ಟಿದೆ.

ಸಾಮಾಜಿಕ ಜಾಲತಾಣಗಳಂತೂ ನಿಮ್ಮ ಖಾಸಗಿ ಬದುಕಿಗೆ ಎಂಟ್ರಿ ಕೊಟ್ಟು, ಅದನ್ನು ಹಾಳು ಮಾಡ್ತಿವೆ ಅಂದ್ರೂ ತಪ್ಪಾಗಲಾರದು. ಅಮಾಯಕರು ಜಾಲತಾಣಗಳಲ್ಲಿ ಬಲಿಪಶುಗಳಾಗ್ತಿದ್ದಾರೆ. ಸೈಬರ್ ಬುಲ್ಲಿಯಿಂಗ್ ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆಯಂತೆ.

ಇತ್ತೀಚೆಗಷ್ಟೆ ಚೆನ್ನೈನ ಬ್ಲಾಗರ್ ನಮ್ಯಾ ಬೈದ್ ಎಂಬಾಕೆಗೆ ವ್ಯಕ್ತಿಯೊಬ್ಬ ಏರ್ ಫ್ರಾನ್ಸ್ ನಲ್ಲಿ ಕೆಲಸದ ಆಫರ್ ಕೊಟ್ಟಿದ್ದ. ಅದರ ಬಗ್ಗೆ ನಮ್ಯ ವಿವರ ಕೇಳಿದ್ದೇ ತಡ, ಆ ಕಾಮುಕ ಅವಳ ಸೊಂಟದ ಸುತ್ತಳತೆ, ಸ್ತನಗಳ ಗಾತ್ರ ಇವನ್ನೆಲ್ಲ ಪ್ರಶ್ನಿಸಲಾರಂಭಿಸಿದ್ದ.

ಅವನೊಬ್ಬ ವಂಚಕ ಅನ್ನೋದನ್ನು ಅರ್ಥ ಮಾಡಿಕೊಂಡ ನಮ್ಯ, ಸರಿಯಾಗೇ ತಿರುಗೇಟು ಕೊಟ್ಟಿದ್ದಾಳೆ. ಮೂರನೇ ಸುತ್ತಿಗೆ ಆಕೆ ಆಯ್ಕೆಯಾಗಿರೋದಾಗಿ ಕರೆ ಮಾಡಿದ್ದ ಭೂಪ, ರೂಮಿನಲ್ಲಿ ಒಂಟಿಯಾಗಿರುವಂತೆ ಸೂಚಿಸಿದ್ದ. ಟ್ಯಾಟೂ ಮತ್ತು ಹೊಟ್ಟೆ ತೋರಿಸುವಂತೆ ನಮ್ಯಗೆ ಸೂಚಿಸಿದ್ದಾನೆ.

ಇದ್ಯಾವುದನ್ನೂ ಮಾಡದೇ ನಮ್ಯ ಕಾಲ್ ಡಿಸ್ ಕನೆಕ್ಟ್ ಮಾಡಿದ್ಲು. ಚಾಟ್, ವಿಡಿಯೋ ಕಾಲ್ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಅದನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ್ದಾಳೆ. ವಂಚಕನ ಬಣ್ಣ ಬಯಲು ಮಾಡಿದ್ದಾರೆ. ಆತನ ವಿರುದ್ಧ ದೂರು ಕೂಡ ದಾಖಲಿಸಿದ್ದಾಳೆ.

Girls, and everyone around.This is something serious. I don't want anyone to go through this.So please please be…

Posted by Namya Baid on Wednesday, January 3, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...