alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ವಿಡಿಯೋ, ಕಾರಣವೇನು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಜೀವದ ಹಂಗು ತೊರೆದು ಯುವಕನೊಬ್ಬನನ್ನು ರಕ್ಷಿಸುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

ದೇಶದಲ್ಲಿ ಜಾತಿ- ಧರ್ಮದ ಕಾರಣಕ್ಕಾಗಿ ಸಂಘರ್ಷ ನಡೆಯುತ್ತಿರುವ ಸುದ್ದಿಗಳು ಪ್ರತಿದಿನ ಕೇಳಿಬರುತ್ತಿರುವ ಮಧ್ಯೆ ಈ ಪ್ರಕರಣ ವಿಭಿನ್ನವಾಗಿದೆ. ಉತ್ತರಾಖಂಡ್ ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಯುವಕನೊಬ್ಬ ತನ್ನ ಗೆಳತಿಯನ್ನು ಭೇಟಿಯಾಗಲು ನೈನಿತಾಲ್ ನ ಗಿರಿಜಾ ಗ್ರಾಮದ ದೇವಸ್ಥಾನಕ್ಕೆ ಆಗಮಿಸಿದ್ದನೆನ್ನಲಾಗಿದೆ.

ಈ ವೇಳೆ ಗುಂಪೊಂದು ಆತನನ್ನು ಸುತ್ತುವರೆದಿದ್ದು, ಹಲ್ಲೆ ಮಾಡಲಾರಂಭಿಸಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಿಖ್ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್, ಗುಂಪಿನ ದಾಳಿಗೆ ಸಿಲುಕಿದ್ದ ಯುವಕನನ್ನು ತಬ್ಬಿಕೊಂಡು ಆತನನ್ನು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಯುವಕನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವವರೆಗೂ ಬೆಂಗಾವಲಾಗಿ ನಿಂತಿದ್ದಾರೆ.

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಮುಸ್ಲಿಂ ಯುವಕನ ರಕ್ಷಣೆಗೆ ಮುಂದಾದ ಸಬ್ ಇನ್ಸ್ ಪೆಕ್ಟರ್ ಗಗನ್ ದೀಪ್ ಸಿಂಗ್ ರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...