alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ಕೃತ್ಯ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿರುವ ಕೃತ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಡಹಗಲೇ ಎಟಿಎಂಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣ ದೋಚಲು ಮುಂದಾಗಿದ್ದು, ಆದರೆ ಎಟಿಎಂ ಸೆಕ್ಯುರಿಟಿ ಗಾರ್ಡ್ ತೋರಿದ ಸಾಹಸದಿಂದಾಗಿ ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ.

ದೆಹಲಿಯ ಮಜ್ರಾ ದಬಾಸ್ ನಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಬಳಿ ಹೆಲ್ಮೆಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಆಗಮಿಸಿದ್ದು, ಒಳ ನುಗ್ಗಲು ಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಗಾರ್ಡ್ ಇದಕ್ಕೆ ತಡೆಯೊಡ್ಡಿದ ವೇಳೆ ಆತನ ಮೇಲೆ ಗುಂಡು ಹಾರಿಸಿದ್ದಾರೆ.

ದುಷ್ಕರ್ಮಿಗಳ ಪೈಕಿ ಒಬ್ಬಾತ ಎಟಿಎಂ ಗಾರ್ಡ್ ನನ್ನು ಸರಿಸಲು ಯತ್ನಿಸಿದರೆ ಮತ್ತೊಬ್ಬ ಒಳ ನುಗ್ಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಒಳಗಿದ್ದ ಗ್ರಾಹಕ ಭೀತಿಯಿಂದ ಹೊರ ಬಂದಿದ್ದಾನೆ. ದುಷ್ಕರ್ಮಿಗಳಿಬ್ಬರ ಬಳಿ ರಿವಾಲ್ವರ್ ಇದ್ದರೂ ಎದೆಗುಂದದ ಸೆಕ್ಯುರಿಟಿ ಗಾರ್ಡ್ ಅವರ ಪ್ರಯತ್ನಕ್ಕೆ ಸತತವಾಗಿ ತಡೆಯೊಡ್ಡಿದ್ದಾನೆ. ಕೊನೆಗೆ ಜನ ಸೇರುವ ಭಯದಲ್ಲಿ ದುಷ್ಕಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇದೆಲ್ಲ ದೃಶ್ಯಾವಳಿಗಳು ಸನಿಹದಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೀಕ್ಷಿಸಿದವರೆಲ್ಲರೂ ಸೆಕ್ಯುರಿಟಿ ಗಾರ್ಡ್ ತೋರಿದ ಧೈರ್ಯ, ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಆತನನ್ನು ಪುರಸ್ಕರಿಸುವಂತೆ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...