alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾಯ ಲೆಕ್ಕಿಸದೆ ವ್ಯಕ್ತಿಯ ಪ್ರಾಣ ಉಳಿಸಿದ್ದಾನೆ ವಿದ್ಯಾರ್ಥಿ

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ರೈಲಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ರೈಲ್ವೇ ಹಳಿ ಮೇಲೆ ಅಸಹಾಯಕನಾಗಿ ಬಿದ್ದಿರುವ ವ್ಯಕ್ತಿ ಕಂಡು ಬಂದಿದ್ದು, ತನ್ನ ಪ್ರಾಣವನ್ನೂ ಲೆಕ್ಕಿಸದೆ ಆತನ ಜೀವವುಳಿಸಿದ್ದಾನೆ.

ಇಂತದೊಂದು ಘಟನೆ ಮುಂಬೈನಲ್ಲಿ ಸೋಮವಾರ ರಾತ್ರಿ 10-30 ರ ಸುಮಾರಿಗೆ ನಡೆದಿದ್ದು, ಶ್ರವಣ್ ತಿವಾರಿ ಎಂಬ 26 ವರ್ಷದ ಎಂಬಿಎ ವಿದ್ಯಾರ್ಥಿ ಚಾರ್ನಿ ರೋಡ್ ನಿಲ್ದಾಣದಲ್ಲಿ ಲೋಕಲ್ ಟ್ರೈನ್ ಗಾಗಿ ಕಾಯುತ್ತಿದ್ದ.

ಈ ಸಂದರ್ಭದಲ್ಲಿ ರೈಲು ಹಳಿಗಳ ಮೇಲೆ ವ್ಯಕ್ತಿಯೊಬ್ಬ ಬಿದ್ದಿರುವುದು ಶ್ರವಣ್ ಗಮನಕ್ಕೆ ಬಂದಿದೆ. ಅದೇ ಸಮಯದಲ್ಲಿ ರೈಲೊಂದು ಬರುತ್ತಿರುವುದನ್ನು ಗಮನಿಸಿದ ಶ್ರವಣ್, ತಡ ಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ತನ್ನ ಜೀವವನ್ನೂ ಲೆಕ್ಕಿಸದ ಶ್ರವಣ್ ರೈಲು ನಿಲ್ಲಿಸುವಂತೆ ಬೊಬ್ಬೆ ಹೊಡೆದಿದ್ದು, ಇದನ್ನು ಗಮನಿಸಿದ ಚಾಲಕ ರೈಲು ನಿಲ್ಲಿಸಿದ್ದಾರೆ.

ರೈಲು ಹಳಿ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವ್ಯಕ್ತಿ ಆಕಸ್ಮಿಕವಾಗಿ ರೈಲು ಹಳಿ ಮೇಲೆ ಬಿದ್ದಿದ್ದಾನಾ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನಾ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ರವಣ್ ತೋರಿದ ಸಾಹಸಕ್ಕೆ ಈಗ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...