alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ರಕ್ಷಿಸಲು ಈತ ಮಾಡಿದ್ದಾನೆ ಅಪಾಯಕಾರಿ ಸಾಹಸ

fire

ಪಾರ್ಟಿಯಲ್ಲಿ ನಡೆದ ದಿಗಿಲು ಹುಟ್ಟಿಸುವಂತಹ ಘಟನೆಯೊಂದರ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಎಲ್ಲರೂ ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ರು. ಸಂತೋಷವನ್ನು ಸೆಲೆಬ್ರೇಟ್ ಮಾಡುತ್ತಿದ್ರು. ಆಗ ಇದ್ದಕ್ಕಿದ್ದಂತೆ ಮಹಿಳೆಯೊಬ್ಬಳ ದುಪ್ಪಟ್ಟಾಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ನೋಡಿದ್ದೇ ತಡ ಎಲ್ಲರಿಗೂ ಶಾಕ್ ಆಗಿತ್ತು. ಆದ್ರೆ ಅಲ್ಲಿದ್ದ ವ್ಯಕ್ತಿಯೊಬ್ಬನ ಚಾಣಾಕ್ಷತೆ ಮತ್ತು ಸಮಯಪ್ರಜ್ಞೆಯಿಂದಾಗಿ ಆ ಮಹಿಳೆ ಬೆಂಕಿ ಅವಘಡದಿಂದ ಪಾರಾಗಿದ್ದಾಳೆ. ಅರೆಕ್ಷಣವೂ ಯೋಚಿಸದೇ ಆತ ಭಗಭಗನೆ ಉರಿಯುತ್ತಿದ್ದ ದುಪ್ಪಟ್ಟಾವನ್ನು ಬರಿಗೈನಲ್ಲೇ ತೆಗೆದು ನೆಲಕ್ಕೆ ಹಾಕಿ ಹೊಸಕಿದ್ದಾನೆ.

ಇದರಿಂದ ಬೆಂಕಿ ನಂದಿದೆ. ಆದ್ರೆ ಅವಳ ಕೂದಲು ಅಲ್ಪಸ್ವಲ್ಪ ಸುಟ್ಟು ಹೋಗಿದೆ. ಘಟನೆಯಿಂದ ಬೆದರಿದ ಆ ಮಹಿಳೆ ಕಣ್ಣೀರು ಹಾಕಿದ್ದಾಳೆ. ಕೊನೆಗೆ ಅವಳ ಕುಟುಂಬಸ್ಥರೆಲ್ಲಾ ಬಂದು ಸಮಾಧಾನಪಡಿಸಿದ್ದಾರೆ. ಅದೇನೇ ಆದ್ರೂ ಬರಿಗೈಯಲ್ಲಿ ಬೆಂಕಿ ಆರಿಸಿದ ಆತನ ಸಾಹಸವನ್ನು ಮಾತ್ರ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...