alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಕೈಗೆ ಕೊನೆಗೂ ಸಿಕ್ಕಿಬಿದ್ದ ಕಳ್ಳ

bike_1499327159_618x347

ಹರ್ಯಾಣದ ರೋಹ್ಟಕ್ ನಲ್ಲಿ 23 ವರ್ಷದ ಹುಡುಗಿಯೊಬ್ಬಳು ಕಳ್ಳನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. ಪರ್ಸ್ ಕದ್ದು ಬೈಕ್ ನಲ್ಲಿ ಹೋಗ್ತಿದ್ದ ಕಳ್ಳನನ್ನು ಹಿಂಬಾಲಿಸಿದ ಹುಡುಗಿ ಖದೀಮನನ್ನು ಪೊಲೀಸರ ಕೈಗೊಪ್ಪಿಸಲು ಯಶಸ್ವಿಯಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಮಧ್ಯೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಚೈನ್ ಹಾಗೂ ಪರ್ಸ್ ಕಳ್ಳತನ ಮಾಡುವವರ ಬಗ್ಗೆ ಸೂಕ್ತ ಮಾಹಿತಿ ನೀಡುವವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ 23 ವರ್ಷದ ಡಿಂಪಿ ಗುಲಾಟಿ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಾಳೆ. ಮನೆಯಿಂದ ಕಚೇರಿಗೆ ಹೋಗುವ ವೇಳೆ ವಿಜಯನಗರದ ಬಳಿ ಈ ಘಟನೆ ನಡೆದಿದೆ. ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಡಿಂಪಿಯ ಪರ್ಸ್ ಕಿತ್ತುಕೊಂಡು ಹೋಗಿದ್ದಾನೆ. ಪರ್ಸ್ ನಲ್ಲಿ ಹಣ, ಮೊಬೈಲ್ ಹಾಗೂ ಕೆಲ ದಾಖಲೆಗಳಿತ್ತಂತೆ. ಬೈಕ್ ನಲ್ಲಿ ಹೋಗ್ತಿದ್ದ ವ್ಯಕ್ತಿಯನ್ನು ಡಿಂಪಿ ತನ್ನ ಸ್ಕೂಟಿಯಲ್ಲಿ ಹಿಂಬಾಲಿಸಿದ್ದಾಳೆ.

ಮುಂದೆ ಬೇರೆ ವಾಹನ ಬಂದಿದ್ದರಿಂದ ಕಳ್ಳ ತನ್ನ ಗಾಡಿಯ ವೇಗವನ್ನು ಕಡಿಮೆ ಮಾಡಿದ್ದಾನೆ. ಸಮಯ ನೋಡಿ ಕಳ್ಳನ ಗಾಡಿಗೆ ತನ್ನ ಸ್ಕೂಟಿ ಗುದ್ದಿದ್ದಾಳೆ. 35 ವರ್ಷದ ವ್ಯಕ್ತಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಡಿಂಪಿ ಕೂಗಿಕೊಂಡಿದ್ದು ಅಲ್ಲಿ ಸೇರಿದ ಜನರು ಕಳ್ಳನನ್ನು ಪೊಲೀಸ್ ಕೈಗೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...