alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಸಾವಿನ ನೋವಿನಲ್ಲೂ ಸಾರ್ಥಕ ಕಾರ್ಯ ಮಾಡಿದ ಕುಟುಂಬ

ಕೋಲ್ಕತಾದಲ್ಲಿ ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಸಾವಿನ ಬಳಿಕ ಐದು ಜನರ ಪ್ರಾಣ ಕಾಪಾಡಿದ್ದಾಳೆ. ಈ ಮೂಲಕ ಬೇರೆಯವರಿಗೆ ಮಾದರಿ ಆಗಿದ್ದಾಳೆ. ಬಾಲಕಿಯ ಎರಡು ಕಿಡ್ನಿ, ಲಿವರ್, ಕಣ್ಣು ಹಾಗೂ ಚರ್ಮವನ್ನು ದಾನ ಮಾಡಲು ತೀರ್ಮಾನಿಸಲಾಗಿದೆ.

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಅಧಿಕಾರಿಗಳು ಶುಕ್ರವಾರ ಮಲ್ಲಿಕಾ ಮಜುಮ್ದಾರ್ ಬ್ರೇನ್ ಡೆಡ್ ಎಂದು ಘೋಷಿಸಿದ್ದರು. ಆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮಲ್ಲಿಕಾರ ತಂದೆ, ಮಗಳ ಮೆದುಳು ನಿಷ್ಕ್ರಿಯವಾಗಿರುವ ಕುರಿತು ವೈದ್ಯರು ಧೃಡಪಡಿಸಿದ್ದಾರೆ. ನಮ್ಮ ಮಗಳನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ನಮ್ಮದಾಗಿತ್ತು ಇದು ಫಲಿಸಲಿಲ್ಲ. ನಮ್ಮ ಮಗಳ ಅಂಗಾಂಗಗಳಿಂದ ಬೇರೆ ರೋಗಿಗಳ ಜೀವ ಉಳಿಯುತ್ತದೆ ಎಂದು ತಿಳಿದು ಈ ತೀರ್ಮಾನಕ್ಕೆ ಬಂದಿರೋದಾಗಿ ತಿಳಿಸಿದ್ದಾರೆ.

ಮಲ್ಲಿಕಾರ ಎರಡು ಕಿಡ್ನಿಗಳನ್ನು ಇಬ್ಬರು ರೋಗಿಗಳಿಗೆ ಅಳವಡಿಸುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಕೋಲ್ಕತಾ ನಗರದ ಖಾಸಗಿ ಆಸ್ಪತ್ರೆಯಲ್ಲಿನ ಮತ್ತೊಬ್ಬ ರೋಗಿಗೆ ಲಿವರ್ ನೀಡಲು ನಿರ್ಧರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...