alex Certify
ಕನ್ನಡ ದುನಿಯಾ       Mobile App
       

Kannada Duniya

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿಗೆ ರಾಮ್ ಜಿ ಸೇರ್ಪಡೆ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನೇ ಬದಲಾಯಿಸಲು ಮುಂದಾಗಿದೆ. ಇನ್ನು ಮೇಲೆ ಅವರನ್ನು ಭೀಮ ರಾವ್ ರಾಮ್ ಜಿ ಅಂಬೇಡ್ಕರ್ ಎಂದು ಕರೆಯಲು ನಿರ್ಧರಿಸಿದೆ.

ಉತ್ತರ ಪ್ರದೇಶದ ಗವರ್ನರ್ ರಾಮ ನಾಯ್ಕ್ ಈ ಬಗ್ಗೆ ಶಿಫಾರಸು ಮಾಡಿದ್ದರು. ಅದರಂತೆ ಅಂಬೇಡ್ಕರ್ ಅವರ ಮಧ್ಯನಾಮವನ್ನು ರಾಮ್ ಜಿ ಎಂದು ಇಡಲಾಗಿದೆ. ಆದ್ರೆ ಸಮಾಜವಾದಿ ಪಕ್ಷ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಅಂಬೇಡ್ಕರ್ ಅವರ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡ್ತಿದೆ ಅಂತಾ ಆರೋಪಿಸಿದೆ.

ಪಕ್ಷ ಅಂಬೇಡ್ಕರ್ ವಿರೋಧಿಯಲ್ಲ ಎಂದು ಬಿಂಬಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಅಂತಾ ಎಸ್ಪಿ ನಾಯಕರು ದೂರಿದ್ದಾರೆ. ಅಂಬೇಡ್ಕರ್ ಮತ್ತು ಅವರ ತತ್ವ ಸಿದ್ಧಾಂತಗಳನ್ನು ಬಿಜೆಪಿ ವಿರೋಧಿಸುತ್ತದೆ, ಆದ್ರೆ ವೋಟ್ ಬ್ಯಾಂಕ್ ಗಾಗಿ ಇಂತಹ ಕಸರತ್ತು ಶುರು ಮಾಡಿದೆಯೆಂದು ಆರೋಪ ಮಾಡಿದ್ದಾರೆ. ರಾಮ್ ಜಿ ಅನ್ನೋದು ಅಂಬೇಡ್ಕರ್ ರ ತಂದೆಯ ಹೆಸರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...