alex Certify
ಕನ್ನಡ ದುನಿಯಾ       Mobile App
       

Kannada Duniya

ವರ ಮಾಲೆ ಹಾಕಿದ್ದೊಬ್ಬ ಸಿಂಧೂರ ಇಟ್ಟಿದ್ದು ಇನ್ನೊಬ್ಬ…!

ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ವಧು-ವರರ ಮಧ್ಯೆ ವರಮಾಲೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವಧುವಿನ ಪ್ರಿಯಕರ ನಾಲ್ವರ ಸ್ನೇಹಿತರ ಜೊತೆ ಕಲ್ಯಾಣ ಮಂಟಪಕ್ಕೆ ಬಂದಿದ್ದಾನೆ. ಮದುವೆ ಸಂಭ್ರಮದಲ್ಲಿದ್ದ ಕಲ್ಯಾಣ ಮಂಟಪದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ವಧು ಕಳೆದ ಮೂರು ವರ್ಷಗಳಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಇದನ್ನು ಮನೆಯವರಿಗೆ ಹೇಳಿದ್ದಾಳೆ. ಆದ್ರೆ ಪ್ರೀತಿ ವಿವಾಹ ಒಪ್ಪದ ಕುಟುಂಬಸ್ಥರು ಬೇರೆ ಮದುವೆಗೆ ಮುಂದಾಗಿದ್ದಾರೆ. ಮದುವೆ ವೇಳೆ ನಾಲ್ವರು ಸ್ನೇಹಿತರ ಜೊತೆ ಮದುವೆ ಮನೆಗೆ ಬಂದ ಪ್ರೇಮಿ ವಧುವಿನ ಹಣೆಗೆ ಸಿಂಧೂರವಿಟ್ಟಿದ್ದಾನೆ.

ವರನಿಂದ ಹಿಡಿದು ಎಲ್ಲರೂ ಪ್ರೇಮಿ ಮಾಡಿದ ಕೆಲಸ ನೋಡಿ ದಂಗಾಗಿದ್ದಾರೆ. ಎರಡು ಕುಟುಂಬಗಳ ನಡುವೆ ಗಲಾಟೆ ಶುರುವಾಗಿದೆ. ನಂತ್ರ ವಧು ಹಾಗೂ ಪ್ರೇಮಿ ಇಬ್ಬರು ತಮ್ಮ ಪ್ರೇಮ ಸಂಬಂಧವನ್ನು ಎಲ್ಲರ ಮುಂದಿಟ್ಟಿದ್ದಾರೆ. ಫೋಟೋಗಳನ್ನು ವರನಿಗೆ ತೋರಿಸಿದ್ದಾರೆ. ಅಂತಿಮ ನಿರ್ಧಾರವನ್ನು ವರ ವಧುವಿಗೆ ಬಿಟ್ಟಿದ್ದಾನೆ. ಎಲ್ಲರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ನಂತ್ರ ವಧುವನ್ನು ಪ್ರೇಮಿ ಜೊತೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...